38ನೇ ಪತ್ರಕರ್ತರ ರಾಜ್ಯ ಸಮ್ಮೇಳನ: ಅದ್ದೂರಿ ಮೆರವಣಿಗೆ: ಬೀದರ್ ಕಾರ್ಯನಿರತ ಪತ್ರಕರ್ತರು ಭಾಗಿ

ದಾವಣಗೆರೆ:ಫೆ.3: ರಾಜ್ಯದ ಹೃದಯಭಾಗವಾದ ಬೆಣ್ಣೆನಗರಿ ದಾವಣಗೆರೆಯಲ್ಲಿ ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ಐತಿಹಾಸಿಕ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಜರುಗುತ್ತಿದ್ದು ಇಂದು ಬೆಳಿಗ್ಗೆ ನಗರದ ಜಯದೇವ ವೃತ್ತದಿಂದ ಭವ್ಯ ಮೆರವಣಿಗೆ ಆರಂಭವಾಯಿತು.
ಸ್ಥಳಿಯ ಮಹಾನಗರ ಪಾಲಿಕೆ ಮಹಾಪೌರ ವಿನಾಯಕ ಪೈಲ್ವಾನ ಹಾಗೂ ಆಯುಕ್ತರಾದ ರೇಣುಕಾ ಅವರು ಜಂಟಿಯಾಗಿ ಮೆರವಣಿಗೆಗೆ ಚಾಲನೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅದ್ಯಕ್ಷತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಶಿ ಲೋಕೇಶ, ರಾಜ್ಯ ಕಾರ್ಯದರ್ಶಿ ಜಯರಾಮ, ಇತರೆ ಪದಾಧಿಕಾರಿಗಳು, ವಿಶೇಷವಾಗಿ ನಾಡಿನ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದರು.
ರಾಜ್ಯಾದ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕುಳಿತ ಭವ್ಯ ಹಾಗೂ ಅಲಂಕೃತ ರಥದಲ್ಲಿ ಕುಳಿತು ಗಮನ ಸೆಳೆದರು. ಆನೆ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆಯತು. ಶ್ತೀ ರಾಮ, ಲಕ್ಷ್ಮಣ, ಸೀತೆ, ಅಸಂಜನೆಯ, ರಾವಣ ಇತ್ಯಾದಿ ಪಾತ್ರಧಾರಿಗಳು ಮೆರವಣಿಗೆಯ ಶೋಭೆ ಹೆಚ್ಚಿಸಿದರು. ಡೊಳ್ಳು ಕುಣಿತ, ಹಲಗೆ ಕುಣಿತಗಳು ಸೇರಿದಂತೆ ವಿವಿಧ ಜಿಲ್ಲೆಗಳ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಅದ್ಭುತ ಕಲಾ ಪ್ರದರ್ಶನಗೈದರು.
ಬೀದರ್ ಜಿಲ್ಲೆಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ,
ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗಶೆಟ್ಟಿ ಧರಂಪುರ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ದೀಪಕ ಮನ್ನಳ್ಳಿ, ರಾಜ್ಯ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ಗುರುರಾಜ ಕುಲಕರ್ಣಿ ಸಂಘದ ಜಿಲ್ಲಾ ಕಾರ್ಯಕಾರಿ ಸದಸ್ಯರಾದ ಗೋಪಿಚಂದ ತಾಂದಳೆ, ರೇವಣಸಿದ್ದಯ್ಯ ಸ್ಬಾಮಿ, ಸಂತೋಷ ಚಟ್ಟಿ, ಮಹಾರುದ್ರ ಡಾಕುಳಗಿ, ಕಾರ್ತಿಕ ಮಠಪತಿ ಈ ಸಂದರ್ಭದಲ್ಲಿ ಇದ್ದರು.