ಬಳ್ಳಾರಿ: ತಾಲೂಕಿನ ಸಂಜೀವರಾಯನಕೋಟೆ ಸ.ಹಿ.ಪ್ರಾ.ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಶಾಲೆಯ ಹಿರಿಯ ಬಡ್ತಿ ಮುಖ್ಯ ಗುರು ಕೆ.ಕೃಷ್ಣ ವೇಣಿಯವರು ತ್ರಿವರ್ಣ ಧ್ವಜ ಹಾರಿಸುವುದರ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಶಿಕ್ಷಕ ರವಿಚೇಳ್ಳಗುರ್ಕಿ ಭಾರತ ದೇಶದ ಪ್ರಥಮ ಗೃಹಸಚಿವ ವರೂ ಹಾಗೂ ಉಪಪ್ರಧಾನಿಗಳಾದ ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರ ಹೋರಾಟದ ಕುರಿತು ಉಪನ್ಯಾಸ ನೀಡಿದರು. ಶಾಲೆಯ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು