ಶಾಸಕರ ಕಚೇರಿ ಎದುರು ರೈತ ದಲಿತ ಕಾರ್ಮಿಕ ಸಂಘಟನೆಗಳ ಐಕ್ಯೂ ಹೋರಾಟದಿಂದ ಒತ್ತಾಯ ಪತ್ರ ಸಲ್ಲಿಕೆ ಮೈಸೂರಿನ ಜಲದರ್ಸಿನಿ ಯಲ್ಲಿರುವ ಶಾಸಕ ಜಿ ಟಿ ದೇವೇಗೌಡ ಹಾಗೂ ಶಾಸಕ ನಾಗೇಂದ್ರ ರವರ ಕಚೇರಿಯೆದುರು ನಂತರ ಶಾಸಕರಾದ ಎಸ್ ಎ ರಾಮದಾಸ್ ಕಚೇರಿಯೆದುರು ಸ್ವಲ್ಪ ಕಾಲ ಧರಣಿ ನಡೆಸಿ ಒತ್ತಾಯ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟಗಾರರು‌ ಒತ್ತಾಯ ಪತ್ರವನ್ನು ಸಲ್ಲಿಸಿದರು, ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ರೈತ ಕಾರ್ಮಿಕ ವಿರೋಧಿ ಸುಗ್ರಿವಾಗ್ನೆ ಕಾಯ್ದೆ, ಭೂಸುಧಾರಣೆ, ಎಪಿಎಂಸಿ ಕಾಯ್ದೆ ಕೈಗಾರಿಕಾ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ವಾಪಸ್ ಪಡೆಯಲು ಶಾಸಕರು ಪಕ್ಷಭೇದ ಮರೆತು ಒತ್ತಾಯಿಸಬೇಕು ಎಂದು ಒತ್ತಾಯಿಸಲಾಯಿತು. ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ರೈತ ವಿರೋಧಿ ಕಾಯ್ದೆ ಗಳನ್ನು ಜಾರಿ ಮಾಡಲು ಯತ್ನಿಸಿದರೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ, ಕೂರೂನ ಸಂಕಷ್ಟದಲ್ಲಿ ಜನರ ಸಮಸ್ಯೆ ಬಗ್ಗೆ ಚಿಂತನೆ ನಡೆಸಿದೆ, ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಜಾರಿಗೆ ತರುವುದು ಜನತಂತ್ರ ವ್ಯವಸ್ಥೆಯನ್ನು ನಾಶ ಮಾಡಿದಂತೆ ಅದಕ್ಕಾಗಿ ಎಲ್ಲ ಸಂಘಟನೆಗಳು ಒಂದಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ಜನವಿರೋಧಿ ರೈತ ವಿರೋಧಿ ಧೋರಣೆ ತಾಳಿದ ಗುಂಡುರಾವ್ ಸರ್ಕಾರವನ್ನ 1980ರ ದಶಕದಲ್ಲಿ ಧೂಳಿಪಟ ಮಾಡಿದಂತೆ ,ಇಂದಿನ ಸರ್ಕಾರಕ್ಕೂ ಪಾಠ ಕಲಿಸಬೇಕಾಗುತ್ತದೆ, ಎಲ್ಲಾ ಸಂಘಟನೆಗಳು 21 ರಂದು ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ಹಮಿಕೂಳೃಲಾಗಿದೆ ಹಳ್ಳಿ ಹಳ್ಳಿಗಳಿಂದ ಸಾಹಸ್ರಾರು ರೈತರು ಭಾಗವಹಿಸಭೇಕು ಎಂದರು