374 ಸಾರ್ವಜನಿಕರಿಗೆ ಕೋವಿಡ್ ಲಸಿಕೆ

ನಂಜನಗೂಡು:ಏ:09: ನಗರದ ಆರು ಸ್ಥಳಗಳಲ್ಲಿ ಉಚಿತ ಲಸಿಕೆ ಕೇಂದ್ರ ತೆರೆಯಲಾಗಿದ್ದು ಸುಮಾರು ಎರಡು ದಿನದಲ್ಲಿ 374 ಸಾರ್ವಜನಿಕರು ಲಸಿಕೆ ಪಡೆದಿದ್ದಾರೆ ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಮೈತ್ರಿ ತಿಳಿಸಿದರು.
ಸರಿಯಾಗಿ ಇನ್ನು ಕೂಡ ಉಚಿತ ಲಸಿಕೆ ಹಾಕಿಸಿಕೊಳ್ಳಲು ಸ್ಪಂದಿಸುತ್ತಿಲ್ಲ ನಾವು ಕೂಡ ಮನೆಮನೆಗೆ ಹೋಗಿ ಮಾಹಿತಿ ನೀಡಿ ಲಸಿಕೆಯನ್ನು ಹಾಕಿಸಿಕೊಳ್ಳಲು ಸಲಹೆ ನೀಡುತ್ತಿದ್ದೇವೆ ಎರಡು ದಿನದಲ್ಲಿ 374 ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡಿದ್ದಾರೆ ಈ ಉಚಿತವಾಗಿ ಪಡೆದವರು ಅವರವರ ಪಕ್ಕದ ಮನೆಗಳಿಗೆ ಮತ್ತು ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಇದರ ಬಗ್ಗೆ ಮಾಹಿತಿ ನೀಡಿ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲ ನಮ್ಮ ಆರೋಗ್ಯ ದೃಷ್ಟಿಯಿಂದ ನಾವು ಪಡೆಯಬೇಕು ಎಂದು ಅವರು ಕೂಡ ಸಲಹೆ ನೀಡುತ್ತಿದ್ದಾರೆ.ಇವರ ಜೊತೆಗೆ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ನಗರಸಭೆ ಅಧಿಕಾರಿಗಳು ಎಲ್ಲರೂ ಕೂಡ ಮನೆಮನೆಗೆ ತೆರಳಿ ಉಚಿತವಾಗಿ ನೀಡುತ್ತಿರುವ ಲಸಿಕೆಯನ್ನು ಪಡೆಯಬೇಕೆಂದು ಮಾಹಿತಿ ನೀಡುತ್ತಿದ್ದೇವೆ ಎಂದರು.