371 ಜೆ ನ್ಯೂನತೆ ಸರಿಪಡಿಸಲು ಹಸಿರು ಪ್ರತಿಷ್ಠಾನ ಒತ್ತಾಯ

ಕೋಲಾರ,ಮೇ,೨೫- ಸಂವಿಧಾನದ ತಿದ್ದುಪಡಿ ೩೭೧ ಜೆ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಿರುವ ಆದೇಶ ಇವೆರಡರ ನಡುವೆ ಇರುವಂತ ನ್ಯೂನತೆಗಳನ್ನು ಸರಿಪಡೆಸದೆ ಇರುವ ಹಿನ್ನಲೆಯಲ್ಲಿ ಹೈದರಾಬಾದ್-ಕರ್ನಾಟಕದ ಮೀಸಲಾತಿ ಹುದ್ದೆಗಳಿಗೆ ಪ್ರತ್ಯೇಕ ನೇಮಕಾತಿ ಮಾಡುತ್ತಿರುವುದರಿಂದ ಇತರೆ ಕರ್ನಾಟಕ ಭಾಗಗಳಿಗೆ ಅನ್ಯಾಯವಾಗುತ್ತಿದೆ. ರಾಜ್ಯ ಮಟ್ಟಕ್ಕೆ ಸೇರದ ಮತ್ತು ಸೇರಿರದ ಹುದ್ದೆಗಳನ್ನು ಹೈದರಾಬಾದ್-ಕರ್ನಾಟಕದ ನೇಮಕಾತಿಗಳಲ್ಲಿ ಪರಿಗಣಿಸಲಾಗುತ್ತಿರುವುದರಿಂದ ಮೂಲ ಕರ್ನಾಟಕದವರಿಗೆ ವಂಚನೆಯಾಗುತ್ತಿದೆ. ಇದರ ವಿರುದ್ದ ಜೂನ್ ೧ ರಂದು ಬೆಂಗಳೂರಿನ ಫ್ರೀಂಡಂ ಪಾರ್ಕಿನಲ್ಲಿ ಹಸಿರು ಪ್ರತಿಷ್ಠಾನವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿ ಕೊಳ್ಳುವುದಾಗಿ ತಿಳಿಸಿದರು,
ನಗರದ ಪತ್ರಕರ್ತ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ೨೦೧೬ರಲ್ಲಿ ಸಂವಿಧಾನ ತಿದ್ದುಪಡಿ ೩೭೧ ಜೆ. ಜಾರಿಯಾಗಿದ್ದು ಹೈದರಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ ಇದರಿಂದಾಗಿ ರಾಜ್ಯದ ೨೪ ಜಿಲ್ಲೆಗಳಿಗೆ ಪೆಟ್ಟು ತಿನ್ನುವಂತಾಗಿದೆ. ಶೈಕ್ಷಣಿಕವಾಗಿ, ಉದ್ಯೋಗ, ಮತ್ತು ಬಡ್ತಿ ವಿಚಾರಗಳಲ್ಲಿ ಮೂಲ ಕರ್ನಾಟಕದವರಿಗೆ ಅನ್ಯಾಯವಾಗುತ್ತಿದೆ. ಹೈದರಬಾದ್-ಕರ್ನಾಟಕದವರ ಮೀಸಲಾತಿ ನೇಮಕಾತಿ ನಂತರವು ಇತರೆ ಕಡೆಗಳಲ್ಲಿ ಅವರ ನೇಮಕಾತಿಗಳನ್ನು ಮಾಡಿ ಕೊಳ್ಳುತ್ತಿರುವುದರಿಂದ ಶೇ ೫೦ಕ್ಕೂ ಹುದ್ದೆಗಳ ಭರ್ತಿಗಳಾಗುತ್ತಿದೆ. ಅದರೆ ಮೂಲ ಕರ್ನಾಟಕದವರ ಸಂಖ್ಯೆ ಕ್ಷೀಣಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕದ ನೇಮಕಾತಿಗಳಲ್ಲಿ ಹೈದರಬಾದ-ಕರ್ನಾಟಕದವರೇ ಅಧಿಕ ಸಂಖ್ಯೆಯಲ್ಲಿರುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು,
೩೭೧ನೇ ಜೆ ಸಂವಿಧಾನ ತಿದ್ದುಪಡಿ ಜಾರಿಗೆ ಜನಪ್ರತಿಗಳು ಈವರೆಗೆ ೮ ಸುತ್ತೊಲೆಗಳನ್ನು ಹೊರಡಿಸಿರುವ ಹಿನ್ನಲೆಯಲ್ಲಿ ಹೈದರಬಾದ್- Pರ್ನಾಟಕದವರಿಗೆ ನೇಮಕಾತಿಗಳಲ್ಲಿ ಲಾಭವಾಗುತ್ತಿದ್ದು ಇತರೆ ಕರ್ನಾಟಕದವರಿಗೆ ನಷ್ಟವಾಗುತ್ತಿದೆ. ಬಡ್ತಿ ವಿಚಾರಗಳಲ್ಲಿ ಭಾರಿ ಅನ್ಯಾಯ ಕಾಣುತ್ತಿದ್ದೇವೆ. ಮೀಸಲಾತಿಯ ಲಾಭದಲ್ಲಿ ಬೇಗ,ಬೇಗನೆ ಬಡ್ತಿ ಲಾಭಗಳು ಪಡೆದು ಉನ್ನತ ಹುದ್ದೆಗಳಿಗೆ ಹೋದರೂ ಇವರ ಜೊತೆಯಲ್ಲಿ ನೇಮಕವಾದವರು ಇನ್ನು ಅದೇ ಹುದ್ದೆಗಳಲ್ಲಿ ಮುಂದುವರೆಯುತ್ತಿದ್ದಾರೆ ಎಂದು ಉದಾಹರಿಸಿದರು,
ಸರ್ಕಾರದ ನೇಮಕಾತಿಯಲ್ಲಿ ರಾಜ್ಯದಲ್ಲಿ ಜಾರಿ ಇರುವ ಮೀಸಲಾತಿ ಅನ್ವಯ ಹೈದರಾಬಾದ್ ಕರ್ನಾಟಕ ನೌಕರರನ್ನು ಸಹ ನೇಮಕಾತಿ ಮಾಡಿ ಕೊಳ್ಳಬೇಕಾಗಿದೆ ಅದರೆ ಹೈದರಾಬಾದ್-ಕರ್ನಾಟಕಕ್ಕೆ ಸಂಬಂಧಿಸಿದಂತೆ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಒಂದೇ ಬಾರಿಗೆ ಪ್ರತ್ಯೇಕವಾಗಿ ನೇಮಿಸಿ ಕೊಂಡು ಇತರೆ ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಕೊಳ್ಳದೆ ಹೈದರಾಬಾದ್-ಕರ್ನಾಟಕದವರನ್ನೆ ನೇಮಕಾರಿಯಲ್ಲಿ ಮುಂದುವರೆಸುತ್ತಿದ್ದಾರೆ. ಜೇಷ್ಟತೆಯಲ್ಲಿ ಹಿರಿಯರಾಗಿ ಎಲ್ಲಾ ಉನ್ನತ ಹುದ್ದೆಗಳಿಗೆ ಕೆಲವೇ ವರ್ಷಗಳಲ್ಲಿ ಹೈದರಾಬಾದ್- ಕರ್ನಾಟಕದವರೇ ಭರ್ತಿಯಾಗುತ್ತಾರೆ. ಹೈದರಾಬಾದ್ ಜೇಷ್ಟತೆಯವರನ್ನು ಕರ್ನಾಟಕದ ಜೇಷ್ಠತೆ ಪಟ್ಟಿಯಲ್ಲಿ ಸೇರ್ಪಡೆ ಮಾಡುತ್ತಿರುವುದರಿಂದ ಅವರ ನೇಮಕಾತಿ ಸಂಖ್ಯೆಯು ಶೇ ೫೦ಕ್ಕಿಂತ ಹೆಚ್ಚಾಗುತ್ತಿದೆ ಎಂದು ವಿವರಿಸಿದರು,
ಹೈದರಬಾದ್ ಕರ್ನಾಟಕದ ಬಾಗಗಳಲ್ಲಿ ನಮಗಿಂತ ಹೆಚ್ಚಾಗಿ ಪ್ರಕೃತಿ ಸಂಪನ್ಮೋಲಗಳಿಂದ ಕೊಡಿದ್ದರೂ ಸಹ ನಮ್ಮ ಜನಪ್ರತಿ ನಿಧಿಗಳ ನಿರ್ಲಕ್ಷತೆಯಿಂದಾಗಿ ನೇಮಕಾತಿಗಳಲ್ಲಿ, ಬಡ್ತಿಗಳಲ್ಲಿ ಹಾಗೂ ಶೈಕ್ಷಣಿಕವಾಗಿ ಅನ್ಯಾಯಕ್ಕೆ ಒಳಗಾಗುತ್ತಿರುವುದನ್ನು ಸರಿಪಡೆಸಲು ಸರ್ಕಾರ ಮುಂದಾಗ ಬೇಕು. ಹೈದರಬಾದ್-ಕರ್ನಾಟಕ ಸಂವಿಧಾನ ೩೭೧ ಜೆ. ನಿಗದಿತ ಮೀಸಲಾತಿಗೊ ಅಧಿಕವಾಗಿ ಹುದ್ದೆಗಳಲ್ಲಿ ನೇಮಕಾತಿ, ಬಡ್ಡಿ, ಶೈಕ್ಷಣಿಕವಾಗಿ ಸೌಲಭ್ಯಗಳನ್ನು ನೀಡುವುದರಿಂದ ಮೂಲ ಕರ್ನಾಟಕದವರಿಗೆ ಧಕ್ಕೆಯಾಗುತ್ತಿದೆ. ಪ್ರತ್ಯೇಕತೆಗೆ ಕಡಿವಾಣ ಹಾಕಲು ನಮ್ಮ ಪ್ರತಿಭಟನೆ ಅಂದೋಲನವಾಗಿದೆ. ಈ ನಮ್ಮ ಹೋರಾಟಕ್ಕೆ ಎಲ್ಲರೂ ಕೈಜೋಡಿಸ ಬೇಕೆಂದು ಮನವಿ ಮಾಡಿದರು.