
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.17: ಸಂವಿಧಾನ ತಿದ್ದುಪಡಿ ಕಾಯ್ದೆ 371 ಜೆ ಜಾರಿಯಿಂದ ಕಲ್ಯಾಣ ಕರ್ನಾಟಕ ಭಾಗದ ಜನತೆ ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿ ಪಡೆದು ಜೀವನ ಮಟ್ಟ ಸುಧಾರಣೆಗೆ ಕಾರಣವಾಗಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.ಅವರು ಇಂದು ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ರಾಷ್ಟ್ರ ಧ್ವಜಾಚರಣೆ ಮಾಡಿ, ಪೊಲೀಸ್ ತುಕಡಿಯಿಂದ ವಂದನೆ ಸ್ವೀಕರಿಸಿ, ನಿಜಾಮರ ಆಡಳಿತದಿಂದ ಹೈದ್ರಾಬಾದ್ ಕರ್ನಾಟಕ ವಿಮೋಚನೆಗೆ ಕಾರಣರಾದ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ.ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.ದೇಶಸ್ವಾತಂತ್ರ್ಯ ಗೊಂಡರೂ ಹೈದ್ರಾಬಾದ್ ನ ನಿಜಾಮರ ಆಡಳಿತದಲ್ಲಿದ್ದ ರಾಜ್ಯದ ಹೈದ್ರಾಬಾದ್ ಕರ್ನಾಟಕ ಭಾಗ ನಿಜಾಮರ ವಿರುದ್ದ ನಡೆಸಿದ ಹೋರಾಟವನ್ನು ಸ್ಮರಿಸಿದರು.2013 ರಿಂದ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಈ ಪ್ರದೇಶದ ವಿಶೇಷ ಅಭಿವೃದ್ದಿ ರಾಜ್ಯ ಸರ್ಕಾರ ಅನುದಾನ ನೀಡುತ್ತಿದೆ. ಇದರಡಿ ಬಳ್ಳಾರಿ ಜಿಲ್ಲೆಗೆ 342.87 ಕೋಟಿ ರೂ ಅನುದಾನ ಹಂಚಿಕೆಯಾಗಿದ್ದು ಈ ವರೆಗೆ 160.72 ಕೋಟಿ ರೂ ವೆಚ್ಚ ಮಾಡಿದೆ ಇದು ಅಭಿವೃದ್ಧಿಗೆ ಪೂರಕವಾಗಿದೆಂದು ಹೇಳಿದರು.ರಾಜ್ಯದ ಸರ್ಕಾರ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳ ಬಗ್ಗೆ ವಿವರಿಸಿದರು.ಸಚಿವರು ಈ ಸಂದರ್ಭದಲ್ಲಿ ಕೆಕೆಆರ್ ಡಿಬಿಯಿಂದ ಪ್ರಕಟಿಸಿದ ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಹೈ.ಕ.ಹೋರಾಟ ಸಮಿತಿಯ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಅವರು ಹೈದ್ರಾಬಾದ್ ಕರ್ನಾಟಕ ವಿಮೋಚನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ಪ್ರಾದೇಶಿಕ ಅಸಮಾನತೆ ನಿವಾರಣೆಗೆಂದು ಅಸ್ತಿತ್ವಕ್ಕೆ ಬಂದ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಬಳ್ಳಾರಿ ಜಿಲ್ಲೆ ಸೇರಿಸದ ಕಾರಣ ಹೋರಾಟ ಆರಂಭಿಸಿದ್ದು ಕರ್ನಾಟಕ ಯುವಕ ಸಂಘ ಅದು ನನ್ನ ಅಧ್ಯಕ್ಷತೆಯಲ್ಲಿ. ನಂತರ ಈ ಹೋರಾಟ ಸರ್ವ ಪಕ್ಷಗಳಿಂದ ನಡೆದು ಯಶಸ್ವಿಯಾಯ್ತು. ನಂತರ ಮಂಡಳಿಯಿಂದ ನಡೆದ ಅಭಿವೃದ್ಧಿ ಮತ್ತು ಪರಿಣಾಮಗಳ ಕುರಿತು ತಿಳಿಸುತ್ತ. 35 ಸೂಚ್ಯಾಂಕದ ಆಧಾರದ ಮೇಲೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗಬೇಕು. ಇದನ್ನು ಅಧಿಕಾರಿಗಳು ಮನಗಾಣಬೇಕೆಂದರು.ಅಧ್ಯಕ್ಷತೆವಹಿಸಿದ್ದ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, 371 ಜೆ ಮೀಸಲಾತಿಯಡಿ ಸೀಟು ಪಡೆದು ಓದಿ ಉದ್ಯೋಗ ಪಡೆದವರು ಇದೇ ಪ್ರದೇಶದಲ್ಲಿದ್ದು ಅಭಿವೃದ್ಧಿಗೆ ಪೂರಕರಾಗಬೇಕು ಎಂದು ಮನವಿ ಮಾಡಿದರು.ವೇದಿಕೆಯಲ್ಲಿ ಪಾಲಿಕೆಯ ಮೇಯರ್ ತ್ರಿವೇಣಿ, ಉಪ ಮೇಯರ್ ಜಾನಕಿ, ಡಿಸಿ ಪ್ರಶಾಂತ್ ಮಿಶ್ರ, ಡಿಐಜಿ ಲೋಕೇಶ್, ಎಸ್ಪಿ ರಂಜಿತ್ ಕುಮಾರ್, ಜಿಪಂ ಸಿಈಓ ರಾಹುಲ್ ಶರಣಪ್ಪ ಸಂಕನೂರು ಮೊದಲಾದವರು ಇದ್ದರು. ಡಿ.ಕಗ್ಗಲ್ಲಿನ ದೊಡ್ಡ ಬಸವ ಗವಾಯಿ ಮತ್ತವರ ತಂಡದಿಂದ ನಾಡಗೀತೆ, ವಿನೋದ್ ಕಾರ್ಯಕ್ರಮ ನಿರೂಪಣೆ ನಡೆಯಿತು.ಕೆ.ಕೆ.ಆರ್.ಡಿ.ಬಿ ಮಂಡಳಿಯ ಅನುದಾನದಲ್ಲಿ ಶೇ 35 ರಷ್ಟು ಕಲ್ಬುರ್ಗಿಗೆ ವೆಚ್ಚಮಾಡಲಾಗುತ್ತಿದೆ. ಉಳಿದ ಜಿಲ್ಲೆಗಳಿಗೂ ಸಮಾನವಾಗಿ ಹಂಚಿಕೆಯಾಗಬೇಕು.ನಂಜುಂಡಪ್ಪ ವದಿಯನ್ವಯ ಅಭಿವೃದ್ಧಿ ಕುರಿತ ಅಧ್ಯಯನ ನಡೆಯಬೇಕು.ಸಿರಿಗೇರಿ ಪನ್ನರಾಜ್, ಅಧ್ಯಕ್ಷರು, ಹೈ.ಕ.ಹೋರಾಟ ಸಮಿತಿ ಬಳ್ಳಾರಿ.