ಕಲಬುರಗಿ:ಸೆ.4: ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ದಿಟ್ಟ ನಿರ್ಧಾರ ಕೈಗೊಂಡು ಬದ್ಧತೆ ಪ್ರದರ್ಶಿಸುವದು ಅತಿ ಅವಶ್ಯವಾಗಿದೆ ಎಂದು ಕಲ್ಯಾಣ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಅವರು ದುಂಡು ಮೇಜಿನ ಸಭೆಯ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ದುಂಡು ಮೇಜಿನ ಸಭೆ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಜರುಗಿತು. ಸಭೆಯಲ್ಲಿ ಲಿಂಗರಾಜ ಸಿರಗಾಪೂರ,ಪೆÇ್ರ.ಕೇದಾರ ಪಾಟೀಲ, ಅಬ್ದುಲ್ ರಹೀಂ, ಸಾಜಿದ್ ಅಲಿ ರಂಜೊಹಳ್ವಿ,ಶಾಂತಪ್ಪ ಕಾರಭಾಸಗಿ,ಸಾಬಿರ್ ಅಲಿ,ಬವರಾಜ ಮ್ಯಾಗಿ,ಸೂರ್ಯಕಾಂತ ಕೆ.ಬಿ, ಭೀಮರಾಯ ಕಂದಳ್ಳಿ, ಅಬ್ದುಲ್ ಖದೀರ್,ರಾಜು ಜೈನ್,ಡಾ.ಮಾಜಿದ ದಾಗಿ ಮಲ್ಲಿನಾಥ ಸಂಘಶೆಟ್ಟಿ, ಶರಣಬಸಪ್ಪ.ಕೆ,ಎಮ್.ಎ.ಖಾನ್,ಮಾಣಿಕರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನೇಮಕಾತಿ ಮತ್ತು ಮುಂಬಡ್ತಿಗಳಲ್ಲಿ ಕಲ್ಯಾಣದ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯಕ್ಕೆ ಕಡಿವಾಣ ಹಾಕಬೇಕು. ನೇಮಕಾತಿಗಳು ಮತ್ತು ಮುಂಬಡ್ತಿಗಳು ಸಂಪುಟ ಉಪ ಸಮಿತಿಯು ಪರಿಶೀಲನೆ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು.ಖಾಲಿ ಇರುವ ಎಲ್ಲಾ ಹುದ್ದೆಗಳು ಕಾಲಮಿತಿಯಲ್ಲಿ ಭರ್ತಿ ಮಾಡಲು ವಿಶೇಷ ಕ್ರಮ ಕೈಗೊಳ್ಳಬೇಕು.371 ಜೆ ಕಲಂ ನಿಯಮದಂತೆ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಪ್ರಾದೇಶಿಕ ಕಚೇರಿ ಕಲಬುರ್ಗಿಯಲ್ಲಿ ಸ್ಥಾಪಿಸಬೇಕು. ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು. ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ಜನಮಾನಸದ ಉತ್ಸವ ರೂಪದಲ್ಲಿ ಆಚರಣೆಗೆ ಸರ್ಕಾರ ವಿಶೇಷ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಲಾಯಿತು.ಸಭೆಯಲ್ಲಿ ಶಿವಕುಮಾರ ಕಲಶೆಟ್ಟಿ,ಕೆ.ಮೋಹನ, ಸುಧಾಕರ್ ಎಸ್, ರಘುನಾಥ, ಶ್ರೀಕಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.