371(ಜೆ) ವಿರುದ್ಧ ಅಪಪ್ರಚಾರ: ಜೂ.1ರಂದು ಬೃಹತ್ ಹೋರಾಟ

ಕಲಬುರಗಿ:ಮೇ.30: ಕಲ್ಯಾಣಕರ್ನಾಟಕ ಭಾಗದಜನರಿಗೆ371 (ಜೆ)ಲಾಭಗಳು ದೊರಕದಂತೆಚಿತಾವಣೆ ಮಾಡುತ್ತಿರುವ ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧಜೂನ್ 1ರಂದು ಬೆಳಗ್ಗೆ ಸ್ಥಾನಮಾನ ವಿರೋಧಿ ಮತ್ತು ಸಂವಿಧಾನ ವಿರೋಧಿ, ಕಲ್ಯಾಣಕರ್ನಾಟಕಜನ ವಿರೋಧಿ ಹೋರಾಟಕ್ಕೆ ಖಂಡಿಸಿ ಜೂನ್ 1ರಂದು ಬೆಳಗ್ಗೆ 10ಕ್ಕೆ ನಗರದಸರ್ದಾರ್‍ವಲ್ಲಭಬಾಯಿಪಟೇಲ್ ವೃತ್ತದಲ್ಲಿ ಬೃಹತ್ ಹೋರಾಟ ನಡೆಸಲಾಗುವುದುಎಂದುಕಲ್ಯಾಣಕರ್ನಾಟಕ ಹೋರಾಟ ಸಮಿತಿಯ ಮುಖಂಡ, ಎಚ್‍ಕೆಇಅಧ್ಯಕ್ಷಶಶಿಲ್ ಜಿ.ನಮೋಶಿ ಹಾಗೂ ಸಮಿತಿಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿಸಂಯುಕ್ತಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಅವರು, ಕಲ್ಯಾಣಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ವಿಶೇಷ ಸ್ಥಾನಮಾನಜಾರಿಯಾದ ನಂತರರಾಜ್ಯದ ಬಹಳಷ್ಟು ಹುದ್ದೆಗಳು ಕಲ್ಯಾಣಕರ್ನಾಟಕದವರೇ ಕಬಳಿಸುತ್ತಿದ್ದಾರೆ. ಶೈಕ್ಷಣಿಕಕ್ಷೇತ್ರದಲ್ಲಿಯೂಕಲ್ಯಾಣದವರೇ ಮೇಲುಗೈ ಸಾಧಿಸುತ್ತಿದ್ದಾರೆ. ಇದರಿಂದರಾಜ್ಯದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ಅಪಪ್ರಚಾರ ಮಾಡುವಮೂಲಕ 24 ಜಿಲ್ಲೆಯಜನರಿಗೆತಪ್ಪು ಸಂದೇಶ ನೀಡುವ ಸಂವಿಧಾನ ವಿರೋಧಿಕೃತ್ಯವನ್ನು ಕೆಲವರು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ವಾಸ್ತವ ಸ್ಥಿತಿ ಏನೆಂಬುದನ್ನುಅರ್ಥ ಮಾಡಿಸಲು ಈ ಹೋರಾಟರೂಪಿಸಲಾಗಿದೆಎಂದು ವಿವರಿಸಿದರು.
ಸರಕಾರಿ ನೌಕರಿ, ಶೈಕ್ಷಣಿಕ ಪ್ರವೇಶಗಳಲ್ಲಿ ಮೀಸಲಾತಿ ಮತ್ತು 371(ಜೆ) ಅಡಿ ಸ್ವಾಯತ್ತಅಭಿವೃದ್ಧಿ ಮಂಡಳಿ ರಚನೆಯಾಗಿಒಂದುದಶಕ ಕಳೆದಿದೆ. ಈ ಕಾಲಾವಧಿಯಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಾ ಬಂದಿವೆ. ಭವಿಷ್ಯದಲ್ಲಿಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಿರುವಾಗ, ಬೆಂಗಳೂರು ಕೇಂದ್ರಿತಕೆಲವು ಪಟ್ಟಭದ್ರ ಹಿತಾಸಕ್ತಿಯ ಗುಂಪು ಕಲ್ಯಾಣಕರ್ನಾಟಕ ಪ್ರದೇಶಕ್ಕೆ371 (ಜೆ) ಅಡಿ ಲಭಿಸುತ್ತಿರುವ ಸವಲತ್ತುಗಳಿಂದ ಈಷ್ರ್ಯೆಗೆ ಒಳಗಾಗಿ ಕಲ್ಯಾಣಕರ್ನಾಟಕ ಭಾಗದಕುರಿತುಇಲ್ಲಸಲ್ಲದಅಪಪ್ರಚಾರ ಮಾಡುತ್ತಿದೆಎಂದುನಮೋಶಿ ಹಾಗೂ ದಸ್ತಿ ಬೇಸರ ವ್ಯಕ್ತಪಡಿಸಿದರು.
ಸಂವಿಧಾನದ ಮೂಲ ಆಶಯದಂತೆ ಮೀಸಲಾತಿಎಂದರೆ ಅಭ್ಯರ್ಥಿಗಳು ಅರ್ಹತೆಯ ಮಾನದಂಡಕ್ಕೆ ಒಳಪಟ್ಟು ಮೆರಿಟ್‍ಕೋಟಾದಲ್ಲಿ ಸ್ಥಾನ ಪಡೆಯುತ್ತಾರೆ. ಒಂದುವೇಳೆ, ಮೆರಿಟ್‍ಅಡಿ ಸ್ಥಾನ ಸಿಗದಿದ್ದರೆ ಮೀಸಲಾತಿಯಕೋಟಾ ಅಡಿ ನೌಕರಿಅಥವಾ ಶೈಕ್ಷಣಿಕ ಮೀಸಲಾತಿ ಪಡೆಯುವುದು ಸಹಜ ಪ್ರಕ್ರಿಯೆಯಾಗಿದೆ. ಆದರೆ, ಸಂವಿಧಾನ ಕಲ್ಪಿಸಿದ ಮೀಸಲಾತಿಯ ಮೂಲ ಸಿದ್ಧಾಂತದ ಅರ್ಥವೇಗೊತ್ತಿಲ್ಲದ ಪಟ್ಟಭದ್ರ ಹಿತಾಸಕ್ತಿಗಳುಅಪಪ್ರಚಾರದ ಮೂಲಕ ಅಖಂಡಕರ್ನಾಟಕಒಡೆಯುವ ಹತಾಶಯತ್ನನಡೆಸುತ್ತಿದ್ದಾರೆಎಂದುಅವರು ಟೀಕಿಸಿದರು.
ಕಲ್ಯಾಣಕರ್ನಾಟಕ ಪ್ರದೇಶಎಷ್ಟು ಹಿಂದುಳಿದಿದೆ ಎಂಬುದನ್ನುಅಧಿಕೃತವಾಗಿ ಖಾತ್ರಿಪಡಿಸಿಕೊಳ್ಳಲು ಸರಕಾರದಅಧಿಕೃತ ಸಂಸ್ಥೆಗಳಾದ ಸತ್ಯಶೋಧನಾ ಸಮಿತಿ, ಧರಂಸಿಂಗ್ ಸಮಿತಿಹಾಗೂ ನಂಜುಂಡಪ್ಪ ವರದಿ ಸಮಿತಿಗಳು ತಮ್ಮತಮ್ಮ ವರದಿಗಳಲ್ಲಿ ಸ್ಪಷ್ಟವಾಗಿಇರುವ ಸತ್ಯವನ್ನುಉಲ್ಲೇಖಿಸಿವೆ. ವಿಶಾಲ ಕರ್ನಾಟಕದ ಮಾತಿಗೆ ಬಂದಾಗಕಲ್ಯಾಣಕರ್ನಾಟಕ ಜಿಲ್ಲೆಗಳ ಜನರು ಶಿಕ್ಷಣ ಮತ್ತುಉದ್ಯೋಗಾವಶಕಾಶ ಮತ್ತುಅಭಿವೃದ್ಧಿಯಿಂದವಂಚಿತರಾದಾಗಕ್ಯಾರೆಎನ್ನದ ಸಂವಿಧಾನ ವಿರೋಧಿ ಶಕ್ತಿಗಳು ಇಂದು371 (ಜೆ) ಅಡಿ ಕಲ್ಯಾಣ ಭಾಗಕ್ಕೆ ಸಂವಿಧಾನಬದ್ಧವಾಗಿ ಸವಲತ್ತುಗಳು ಲಭಿಸುತ್ತಿರುವಾಗಆರಂಭಿಕ ಹಂತದಲ್ಲಿಯೇ 371(ಜೆ) ಕುರಿತುವಿರೋಧಿಸುತ್ತಿರುವ ಮೂಲಕ ಕೀಳುಮಟ್ಟದ ಬುದ್ಧಿ ಪ್ರದರ್ಶನ ಮಾಡುತ್ತಿವೆಎಂದರು.
ಹಾಗಾಗಿ, ಕಲ್ಯಾಣಕರ್ನಾಟಕ ಹೋರಾಟ ಸಮಿತಿಅಡಿಯಲ್ಲಿಜೂ.1ರಂದು ನಡೆಯುವ ಬೃಹತ್ ಹೋರಾಟದಲ್ಲಿಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತಇರುವ ಸರಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಸಿಬ್ಬಂದಿ, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮುಖಂಡರುಹಾಗೂ ಎಲ್ಲರಾಜಕಿಯ ಪಕ್ಷಗಳ ಮುಖಂಡರು, ಆಯಾಕ್ಷೇತ್ರದಗಣ್ಯರು, ಬುದ್ಧಿಜೀವಿಗಳು, ಚಿಂತಕರು, ಸಾಹಿತಿಗಳು ಹಾಗೂ ಕನ್ನಡಪರ, ಜನಪರ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ, ರೈತಕಾರ್ಮಿಕ, ವಿದ್ಯಾರ್ಥಿ ಪರ, ಕೈಗಾರಿಕಾ, ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ವಿವಿಧಸಂಘ ಸಂಸ್ಥೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ದಸ್ತಿ ಮನವಿ ಮಾಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜದೇಶಮುಖ, ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯಶಾಂತಪ್ಪಸೂರನ್, ಶಿಕ್ಷಣ ತಜ್ಞರಾದಪ್ರತಾಪಸಿಂಗ್ ತಿವಾರಿ, ಡಾ.ಎಸ್.ಎ.ಖಾದ್ರಿ, ಡಾ.ಬಸವರಾಜಕುಮನೂರ, ಪ್ರೊ.ಆರ್.ಕೆ.ಹುಡಗಿ, ಡಾ.ಬಿ.ಸಿ.ಗುಳಶೆಟ್ಟಿ ಸೇರಿದಂತೆಇತರರು ಉಪಸ್ಥಿತರಿದ್ದು ಮಾತನಾಡಿದರು.