371(ಜೆ) ರೂವಾರಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಗರಿಕ ಸನ್ಮಾನ

ಬೀದರ್,ಫೆ.20-ನಗರದ ನೆಹರು ಕ್ರೀಡಾಂಗಣದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ 371(ಜೆ) ಕಲಂ ತಿದ್ದುಪಡಿಯ ರೂವಾರಿ ಎ.ಐ.ಸಿ.ಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಡಾ.ಖರ್ಗೆ ಅವರಿಗೆ ಹನುಮಾನ ಗಧೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಪೂಜ್ಯರಾದ ಗುರುಬಸವ ಪಟ್ಟದ್ದೇವರು, ಡಾ.ಸಿದ್ಧರಾಮ ಬೆಲ್ದಾಳ ಶರಣರು, ಜ್ಞಾನಿ ದರ್ಬಾರಾ ಸಿಂಗ್ ಜೀ, ಮಹ್ಮದ್ ಕೀರ್ಮಾನಿ, ಪೂಜ್ಯ ಭಂತೆ ಜ್ಞಾನಸಾಗರ ನೇತೃತ್ವ ವಹಿಸಿದ್ದರು.
ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ, ರಾಜ್ಯದ ಪೌರಾಡಳಿತ ಸಚಿವರಾದ ರಹಿಮ್ ಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ, ಶಾಸಕರಾದ ಬಿ.ಆರ್ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಮಾಜಿ ಶಾಸಕರಾದ ಅಶೋಕ ಖೇಣಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವಿಜಯಸಿಂಗ್, ಮಾಜಿ ಎಮ್.ಎಲ್.ಸಿ ಕೆ.ಪುಂಡಲಿಕರಾವ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ನಗರ ಸಭೆ ಅಧ್ಯಕ್ಷ ಗೌಸೋದ್ದಿನ್, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಅಮರಕುಮಾರ ಖಂಡ್ರೆ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೆಕ ಪಾಟೀಲ, ಸಾಗರ ಖಂಡ್ರೆ, ಡಾ.ಭೀಮಸೇನ ಶಿಂಧೆ, ಡಾ.ಗುರಮ್ಮ ಸಿದ್ದಾರೆಡ್ಡಿ, ದತ್ತಾತ್ರಿ ಮೂಲಗೆ, ಆನಂದ ದೇವಪ್ಪ, ದಲಿತ ಮುಖಂಡರಾದ ಮಾವಳ್ಳಿ ಶಂಕರ ಉಪಸ್ಥಿತರಿದ್ದರು.