3700 ಕೋಟಿ ರೂ ಬ್ಯಾಂಕ್ ಅವ್ಯವಹಾರ: 11 ರಾಜ್ಯಗಳ‌ 100 ಕಡೆ ಸಿಬಿಐ ದಾಳಿ: ಪರಿಶೀಲನೆ

ನವದೆಹಲಿ, ಮಾ. 25- ಸರಿಸುಮಾರು 3700 ಕೋಟಿ ರೂಪಾಯಿ ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 100 ಕಡೆಗಳಲ್ಲಿ ಕೇಂದ್ರ ಅಪರಾಧಗಳ- ಸಿಬಿಐ ಇಂದು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಬೆಂಗಳೂರು,ಬಳ್ಳಾರಿ ,ದೆಹಲಿ, ಕಾನ್ಪುರ,ಗಾಜಿಯಾಬಾದ್, ಮಥುರ, ನೋಯಿಡಾ, ಗುರುಗ್ರಾಮ, ಚೆನ್ನೈ, ತಿರುವರೂರು,ವೆಲ್ಲೂರು, ತಿರುಪ್ಪೂರು, ಗುಂಟೂರು,, ಹೈದರಾಬಾದ್, ವಡೋದರ, ಕೋಲ್ಕತ್ತಾ, ಪಶ್ಚಿಮಗೋದಾವರಿ, ಸೂರತ್, ಮುಂಬೈ, ಬೋಪಾಲ್, ನಿಮಾದಿ, ತಿರುಪತಿ ಸೇರಿದಂತೆ ದೇಶಾದ್ಯಂತ ಮೂರು ಕಡೆಗಳಲ್ಲಿ ಏಕಕಾಲಕ್ಕೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಡಿಜಿಟಲ್ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಇಂಡಿಯನ್ ಓವರ್ಸೀಸ್ ಬ್ಯಾಂಕ್ ಯೂನಿಯನ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ ಪಂಜಾಬ್ ನ್ಯಾಷನಲ್ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಬ್ಯಾಂಕ್, ಐಡಿಬಿಐ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಸೇರಿದಂತೆ 30 ಬ್ಯಾಂಕುಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಏಕಕಾಲದಲ್ಲಿ ದಾಳಿ ನಡೆಸಿ ಹಲವು ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.

ದೇಶದ ವಿವಿಧ ಕಡೆ ನಡೆಸಿದ ದಾಳಿಯ ಸಂದರ್ಭದಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ದಾಖಲೆಗಳನ್ನು ಎಂದು ಸಿಬಿಐ ಮೂಲಗಳು ತಿಳಿಸಿವೆ.

ಬ್ಯಾಂಕ್ ವಂಚನೆ,ಮೋಸ, ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬ್ಯಾಂಕ್ ಗಳಿಂದ ಸಾಲ ಪಡೆದಿರುವುದು ಸೇರಿದಂತೆ ಅನೇಕ ದೂರುಗಳನ್ನು ಆಧರಿಸಿ ಸಿಬಿಐ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯ ಸಮಯದಲ್ಲಿ ಸಿಕ್ಕ ಮಾಹಿತಿ ಆಧರಿಸಿ ಅವುಗಳನ್ನು ಪರಿಶೀಲಿಸಿ ಮುಂದೆ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ