37 ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಸ್ಮರಣಸಂಚಿಕೆ ಬಿಡುಗಡೆ

ವಿಜಯಪುರ : ಅ.17:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕಳೆದ ಫೆ. 4 ಮತ್ತು 5 ರಂದು ನಡೆದ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಸವಿ ನೆನಪಿಗಾಗಿ ಹೊರ ತಂದ ಕರ್ನಾಟಕ ಪತ್ರಕರ್ತ ಸ್ಮರಣ ಸಂಚಿಕೆ ಸೋಮವಾರ ಇಲ್ಲಿನ ಜಿಪಂ ಸಭಾಂಗಣಲ್ಲಿ ನಡೆಯಿತು.
ರಾಜ್ಯದ ಬೃಹತ್ ಕೈಗಾರಿಕೆ, ಮೂಲಭೂತ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನತೆಯ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಜರುಗಿದ್ದು, ಸಮ್ಮೇಳನದ ಸವಿನೆನಪಿಗಾಗಿ ಸಂಘವು ಹೊರತಂದಿರುವ ‘ಪತ್ರಕರ್ತ’ ಸ್ಮರಣಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಇಂದು ಬಿಡುಗಡೆಗೊಳಿಸಿರುವುದು ಅತೀವ ಸಂತಸ ತಂದಿದೆ ಎಂದರು.
ಸಮ್ಮೇಳನದ ಯಶಸ್ವಿಗೆ ಸಹಕರಿಸಿದ ಜಿಲ್ಲಾಡಳಿತಕ್ಕೆ, ಎಲ್ಲ ಜನಪ್ರತಿನಿಧಿಗಳಿಗೆ, ಜಿಲ್ಲೆಯ ಜನತೆಗೆ, ಕಾನಿಪ ಸಂಘದ ಎಲ್ಲ ಪದಾಧಿಕಾರಿಗಳಿಗೆ, ಹಾಗೂ ಸರ್ವ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಶಾಸಕರಾದ ವಿಠ್ಠಲ ಕಟಕಧೊಂಡ, ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ಪಿ ಹೃಷಿಕೇಶ ಭಗವಾನ್, ಜಿಪಂ ಸಿಇಒ ರಾಹುಲ್ ಶಿಂಧೆ, ಹೆಸ್ಕಾಂ ಎಂಡಿ ಮಹ್ಮದ್ ರೋಷನ್, ಜಿಲ್ಲಾ ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಉಪಾಧ್ಯಕ್ಷರಾದ ಫಿರೋಜ್ ರೋಜಿನದಾರ, ಇಂದುಶೇಖರ ಮಣೂರ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿಗಳಾದ ರಾಹುಲ ಆಪ್ಟೆ, ದೀಪಕ ಶಿಂತ್ರೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿ ಮೆಂಡೇಗಾರ, ಸಮೀರ ಇನಾಮದಾರ, ವಿನೋದ ಸಾರವಾಡ, ಸುನೀಲ ಗೋಡೆನ್ನವರ, ಸುನೀಲ ಕಾಂಬಳೆ, ನಾಮನಿರ್ದೇಶಿತ ಸದಸ್ಯರಾದ ಗುರುರಾಜ ಗದ್ದನಕೇರಿ, ನವೀದ ಅಂಜುಮ ಮಮದಾಪುರ, ವಿಜಯ ಸಾರವಾಡ, ರಾಜ್ಯ ಸಮಿತಿ ನಾಮನಿರ್ದೇಶಿತ ಸದಸ್ಯ ಕೆ.ಕೆ.ಕುಲಕರ್ಣಿ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ಶೆಟಗಾರ, ಹಿರಿಯ ಪತ್ರಕರ್ತರಾದ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಸಲಹಾ ಸಮಿತಿ ಸದಸ್ಯರಾದ ರಫಿ ಭಂಡಾರಿ, ದೇವೇಂದ್ರ ಹೆಳವರ, ರುದ್ರಪ್ಫ ಆಸಂಗಿ, ಅಶೋಕ ಯಡಳ್ಳಿ, ರಾಜು ಪಾಟೀಲ, ಷಡಕ್ಷರಿ ಕಾಂಪು, ಜಿಲ್ಲಾ ವಾರ್ತಾ ಮತ್ತು ಸಾರ್ವನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡ್ಡಮನಿ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.