ಆಶಾಮಂದಿರ ಯೋಜನೆಯಡಿ ನಗರದ ದೇವನೂರು 1ನೇ ಹಂತ ಬಡಾವಣೆಯಲ್ಲಿ ನಿರ್ಮಾಣವಾದ ಮೂಲೆ ನಿವೇಶನಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಹತ್ತಾರು ಶೆಡ್ಡುಗಳನ್ನು ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ತೆರವುಗೊಳಿಸಿದರು.ದೇವನೂರು ಬಡಾವಣೆಯ ಮೂಲೆ ನಿವೇಶನಗಳಾದ ಸಂಖ್ಯೆ 1142, 1162, 1698, 1699, 1728, 1727 (40×40 ಅಡಿ ಅಳತೆಯ 4 ನಿವೇಶನ, 30×40 ಅಡಿ ಅಳತೆಯ 2 ನಿವೇಶನ) ಸುಮಾರು 6 ಕೋಟಿ ಅಂದಾಜು ಮೌಲ್ಯದ ಮೂಲೆ ನಿವೇಶನಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ಡುಗಳನ್ನು ತೆರವುಗೊಳಿಸಿ ನಿವೇಶನವನ್ನು ವಶಕ್ಕೆ ಪಡೆಯಲಾಯಿತು.