ರಾಜ್ಯ ಪೊಲೀಸರಿಗೆ ಅವಹೇಳನ ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಇಂದು ನಗರದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಎಸ್.ಮನೋಹರ್, ಎ.ಆನಂದ್, ಪ್ರಕಾಶ್, ವೆಂಕಟೇಶ್, ಅನಿಲ್‌ಕುಮಾರ್ , ಚಂದ್ರಶೇಖರ್, ಪುಟ್ಟರಾಜು, ಲೋಕೇಶ್ ಬಾಬು ಮತ್ತಿತರರು ಭಾಗವಹಿಸಿದ್ದರು.