ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿರುವ ಗಟಾರಗಳು ತುಂಬಿ ದೇವಸ್ಥಾನದ ಆವರಣಕ್ಕೆ ನುಗ್ಗಿದರು ಸಹ ತೆಲೆ ಕೆಡಿಸಿಕೊಳ್ಳದ ಪುರಸಭೆ ಅಧಿಕಾರಿಗಳು ಗಟಾರಗಳನ್ನು ಸ್ವಚ್ಛಗೊಳಿಸದೇ ಬಿಟ್ಟಿದ್ದು. ಅಶುಚಿತ್ವದಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.ಸಾರ್ವಜನಿಕರು ಓಡಾಡುವ ಜಾಗ ಇದು. ಇದರಿಂದ ರೋಗ ರುಜಿನಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಶೀಘ್ರವೇ ಈ ಸಮಸ್ಯೆಗೆ ಪರಿಹಾರಕ್ಕೆ ಮನವಿಯನ್ನು ನೀಡಿದ್ದಾರೆ.