ನಗರದ ಕಮಲಾ ನಗರದ ಬಸವಣ್ಣ ದೇವಸ್ಥಾನದ ಬಳಿ ಸಮ್ಯತ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಉದ್ಘಾಟಿಸಿದರು. ಅಧ್ಯಕ್ಷ ಬಿ.ಎಂ. ಶ್ರೀನಿವಾಸ್, ಮಾಜಿ ಬಿಬಿಎಂಪಿ ಸದಸ್ಯೆ ಪದ್ಮಾವತಿ ಶ್ರೀನಿವಾಸ್, ಮಂಡಲ ಪ್ರಧಾನ ಕಾರ್ಯದರ್ಶಿ ಬಿ. ಜಯಸಿಂಹ, ವಾರ್ಡ್ ಅಧ್ಯಕ್ಷ ಬಿ.ಟಿ. ಶ್ರೀನಿವಾಸ್, ಮತ್ತಿತರರು ಭಾಗವಹಿಸಿದ್ದರು.