ನಾಯಿ-ಹಂದಿ ಹಾವಳಿ ಕಡಿವಾಣಕ್ಕೆ ಒತ್ತಾಯಿಸಿ ಕರವೇ ಪ್ರತಿಭಟನೆ
ದಾವಣಗೆರೆ,ನ.30: ಮಹಾನಗರದಲ್ಲಿ ಹೆಚ್ಚಾಗಿರುವ ಬೀದಿ ನಾಯಿ, ಹಂದಿಗಳ ಹಾವಳಿಯನ್ನು ತಡೆಗಟ್ಟಬೇಕು ಮತ್ತು ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ನಗರದಲ್ಲಿಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಪಾಲಿಕೆ ಕಚೇರಿ ಎದುರು ಜಮಾಯಿಸಿದ ಕರವೇ ಕಾರ್ಯಕರ್ತರು ಪಾಲಿಕೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಆಂಗ್ಲನಾಮ ಫಲಕಗಳಿಗೆ ಬಳಿಯಲು ಕಪ್ಪು ಮಸಿ ನೀಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ದಾವಣಗೆರೆ ಮಹಾನಗರದಲ್ಲಿ ಬೀದಿನಾಯಿಗಳು ಹಾಗೂ ಹಂದಿಗಳನ್ನು ನಿಯಂತ್ರಿಸುವಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರ ಪರಿಣಾಮವಾಗಿ ರಸ್ತೆಯಲ್ಲಿ ಯಾರು ನಡೆದಾಡಲಾರದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾತ್ರಿ-ಹಗಲೆನ್ನದೇ ಬೀದಿ ನಾಯಿಗಳಿಂದ ಹಾಗೂ ಹಂದಿಗಳಿAದ ಕಚ್ಚಿಸಿಕೊಂಡು ಸಾರ್ವಜನಿಕರು ಆಸ್ಪತ್ರೆ ಸೇರುವಂತಾಗಿದೆ. ಮಕ್ಕಳು ಬೀದಿನಾಯಿಗಳಿಂದ ಕಚ್ಚಿಸಿಕೊಂಡು ನೂರೆಂಟು ಉದಾಹರಣೆಗಳಿವೆ. ಮೊನೆಯಷ್ಟೇ ಭಾಷಾ ನಗರದ ಆರು ವರ್ಷದದ ಬಾಲಕ ಮಹಮ್ಮದ್ ಇರ್ಫಾನ್ ನಾಯಿ ದಾಳಿಗೆ ಒಳಗಾಗಿ ಕಣ್ಣು, ಮೂಗು, ಗದ್ದ ಕಿತ್ತು ಹೋಗಿದೆ. ಮೂಗಿನ ನರಕ್ಕೆ ಹಾನಿಯಾಗಿದೆ. ಕಣ್ಣಿನ ವೈದ್ಯರು ಕಣ್ಣು ಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ಬೆಳೆಯುತ್ತಿರುವ ಬಾಲಕನು ಕುರುಡನಾಗಲು ನಗರಪಾಲಿಕೆಯ ಅಧಿಕಾರಿಗಳೇ ಕಾರಣರಾಗಿದ್ದಾರೆ ಎಂದು ಕಿಡಿಕಾರಿದರು. ಈ ವಿಚಾರವನ್ನು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಕ್ಷಣ ನಗರದಲ್ಲಿ ಬೀದಿನಾಯಿಗಳನ್ನು ಮತ್ತು ಹಂದಿಗಳನ್ನು ಬಿಡಾಡಿ ದನಗಳನ್ನು ದಾವಣಗೆರೆ ನಗರದಿಂದ ಹೊರಗಡೆ ಸಾಗಿಸಲು ಮಹಾನಗರ ಪಾಲಿಕೆ ತಮ್ಮ ಸಿಬ್ಬಂದಿವರ್ಗವನ್ನು ತಕ್ಷಣ ಕಳಿಸಿ ಅವುಗಳನ್ನು ನಿರ್ಮೂಲನೆ ಮಾಡಬೇಕೆಂದು ಆಗ್ರಹಿಸಿದರು. ನಗರದಲ್ಲಿ ಆಂಗ್ಲ ನಾಮಫಲಕಗಳು ಹೆಚ್ಚಾಗಿ ರಾರಾಜಿಸುತ್ತಿವೆ. ಈ ವಿಚಾರಕ್ಕೆ ಸಂಬAಧಿಸಿದAತೆ ಮಹಾಪೌರರು ಮತ್ತು ಆಯುಕ್ತರಿಗೆ ಗಮನಕ್ಕೆ ತರಲಾಗಿದೆ. ಆದರೆ, ಸರ್ಕಾರ ಕನ್ನಡದ ಕಾಯಕ ವರ್ಷ ಎಂದು ಆದೇಶ ಮಾಡಿ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಂಗಡಿ-ಮುಗ್ಗಟ್ಟುಗಳ ಕನ್ನಡದ ನಾಮಫಲಕಗಳು ಹಾಕಲೇಬೇಕು. ಶೇ 65% ರಷ್ಟು ಕನ್ನಡ ನಾಮಫಲಕ ಹಾಕಬೇಕೆಂದು ಆದೇಶಿಸಿದ್ದರೂ ಪಾಲಿಕೆ ಅಧಿಕಾರಿಗಳು ಮೌನವಹಿಸಿರುವುದು ನೋಡಿದರೆ ಅಂಗಡಿಯ ಮಾಲೀಕರೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಆರೋಪಿಸಿದರು.
ಸರ್ಕಾರದ ಆದೇಶದ ಪಾಲಿಸದ ನಾಡದ್ರೋಹಿ ಅಧಿಕಾರಿಗಳನ್ನು ತಕ್ಷಣ ವರ್ಗಾಯಿಸಬೇಕು. ಪಾಲಿಕೆ ಮಹಾಪೌರರು, ಆಯುಕ್ತರು ಹಾಗೂ ಅಧಿಕಾರಿಗಳಿಗೆ ಗುಲಾಬಿ ಹೂಹು ಕೊಟ್ಟು ಆಂಗ್ಲ ನಾಮಫಲಕ ತೆರವುಗೊಳಿಸುವಂತೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಇಂಥ ಮಂಡತನದ ಅಧಿಕಾರಿಗಳು ಆಯುಕ್ತರಿಗೆ ಕಪುö್ಪ ಮಸಿ ಕೊಡುವುದರ ಮೂಲಕ ಪ್ರತಿಭಟನೆ ನಡೆಸಲು ನಡೆಸಲಾಯಿತು ತಕ್ಷಣ ಮಹಾಪೌರರು ಆದೇಶಿಸಬೇಕು ಮತ್ತು ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಪರಮೇಶ್ವರ, ಧರ್ಮರಾಜ್, ಎಂ.ಡಿ.ರಫೀಕ್, ಜಬೀವುಲ್ಲಾ, ಶೌಕತ್, ಮುಬಾರಕ್,ಅಫ್ಜಲ್,ಬಸಮ್ಮ,ಹಬೀದ,ಭಾನುಲಲಿತ,ಸುಜಾತಾ,ಗೋಪಾಲ ದೇವರಮನೆ, ಮೋಹನ್, ಎನ್.ಕೆ.ಇರ್ಫಾನ್, ಖಲೀಂ,ರಮೇಶ್, ಯೋಗೇಶ್ ಮತ್ತಿತರರುಹಾಜರಿದ್ದರು.ReplyReply to allForward