ಮುನವಳ್ಳಿ ಪಟ್ಟಣದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನ.28 ರಂದು ಎನ್.ಸಿ.ಸಿ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು. ಅಧ್ಯಕ್ಷರಾಗಿ ಪ್ರೋ. ಸಿ.ಎಸ್.ಬೇರೆನ್ನವರ, ಮುಖ್ಯ ಅತಿಥಿಗಳಾಗಿ ನಿತ್ಯಾನಂದ ಗೌಡರ್, ಅರುಣ್ ಹೊನ್ನಳ್ಳಿ, ನಂದನ ಪಾಲನಕರ, ಉಪನ್ಯಾಸಕರಾದ ಆನಂದ್ ಕಡ್ಲೆಪ್ಪನವರ, ಶ್ರೀಧರ ಯಲಿಗಾರ, ಎನ್.ಸಿ.ಸಿ ಘಟಕದ ಅಧಿಕಾರಿಗಳಾದ ಪೃಥ್ವಿರಾಜ್ ಪಾಟೀಲ್, ಬೋಧಕೇತರ ವರ್ಗದ ಸಿಬ್ಬಂದಿಗಳು, ಎನ್.ಸಿ.ಸಿ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.