ನಗರದ ಹಳೇ ಹುಬ್ಬಳ್ಳಿ ವೃತ್ತಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರ ವರ್ತುಲ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿ ಇಲ್ಲಿನ ಜಂಗಳಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ತಹಶೀಲ್ದಾರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಿವಾನಂದ ಹೊಸೂರ, ಚಂದ್ರಶೇಖರ ಕಳ್ಳಿಮಠ, ಎ.ಜಿ. ಬಿಚಗತ್ತಿಮಠ, ಜಿ.ಬಿ. ಬಾಳಿಕಾಯಿ, ಶಿವಪ್ಪ ಎಡಗೈ, ವಿನಾಯಕ ಬೇಂದ್ರೆ, ಮಹಾದೇವಪ್ಪ ಅಕ್ಕಿ, ಲೋಕೇಶ ಗುಂಜಾಳ, ವೀರಯ್ಯಸ್ವಾಮಿ ಸಾಲಿಮಠ, ವಿನಾಯಕ ಜವಳಿ ಮತ್ತಿತರರು ಇದ್ದರು.