ಧಾರವಾಡ, ಹಾವೇರಿ, ಗದಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾಣೆಗೆ ಸ್ಪಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್‍ರವರು ನಗರದ ಹಸ್ರತ್ ಸಯ್ಯದಫತೆಶಾವಲಿ ದರ್ಗಾಕ್ಕೆ ಹಾಗೂ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಅಂಜುಮನ್-ಎ-ಇಸ್ಲಾಂ ಸಂಸ್ಥೆ ಉಪಾಧ್ಯಕ್ಷ, ಮಾಜಿ ಪಾಲಿಕೆ ಹಿರಿಯ ಸದಸ್ಯರಾದ ಅಲ್ತಾಫ್‍ನವಾಜ ಎಂ. ಕಿತ್ತೂರ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಡಿ.ಸಿ.ಸಿ ಅಧ್ಯಕ್ಷ ಅನೀಲಕುಮಾರ ಪಾಟೀಲ, ವಿಜಯ ಕುಲಕರ್ಣಿ, ಸದಾನಂದ ಡಂಗನವರ, ಇಕ್ಬಾಲ ನವಲೂರ, ಬಶೀರ ಗುಡಮಾಲ, ಬಾಬಾಜಾನ ಕಾರಡಗಿ, ಮುನ್ನಾ ಮಾರ್ಕರ, ಫಾರೂಕ ಅಬ್ಬುನವರ ಮತ್ತಿತರರು ಉಪಸ್ಥಿತರಿದ್ದರು.