360 ಜನರಿಗೆ ನೇತ್ರ ತಪಾಸಣೆ:ಚಂದ್ರಶೇಖರ ಶೆಟ್ಟಿ

(ಸಂಜೆವಾಣಿ ವಾರ್ತೆ)
ಇಂಡಿ: ಡಿ.8:ಲಾಯನ್ಸ ಸೇವಾ ಸಂಸ್ಥೆ ಇಂಡಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ವಿಜಯಪುರ, ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ತಾಲೂಕಾ ಆಸ್ಪತ್ರೆ ಇಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮತ್ತು ಲೆನ್ಸ ಅಳವಡಿಕೆ ಶಿಬಿರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ 360 ಜನರಿಗೆ ನೇತ್ರ ತಪಾಸಣೆ ಮಾಡಲಾಯಿತು. 112 ರೋಗಿಗಳು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು. ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಎಂ.ಎಂ.ಜೋಶಿ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ನೀಡಲಾಗುವದು ಎಂದು ಲಾಯನ್ಸ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿದರು. ಶಿಬಿರದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ರಾಜೇಶ ಕೋಳೆಕರ, ಹುಬ್ಬಳ್ಳಿ ಡಾ|| ಎಂ.ಎಸ್.ಜೋಶಿ ಆಸ್ಪತ್ರೆಯ ಡಾ|| ಕಟ್ಟಿ, ಲಾಯನ್ಸ ಸಂಸ್ಥೆಯ ಶ್ರೀಪತಿಗೌಡ ಬಿರಾದಾರ,ಡಾ|| ಬಿರಾದಾರ, ಎಂ.ಎಸ್.ಬಿರಾದಾರ, ಡಾ|| ಮಲ್ಲಿಕಾರ್ಜುನ ಅಂಕಲಗಿ, ಎ.ಬಿ.ಬಿರಾದಾರ, ಸದಾನಂದ ಬಿರಾದಾರ, ಬಿ.ಎಂ.ಕೌದಿ, ಮಲ್ಲಿಕಾರ್ಜುನ ಅಂಕಲಗಿ ಲಯನ್ಸ ಸಂಸ್ಥೆಯ ಸದಸ್ಯರು ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡಿದ್ದರು.