36.50 ಕ್ವಿಂಟಲ್ ಹಾಲಿನ ಪುಡಿ ಜಪ್ತಿಃ ಜಿಲ್ಲಾಧಿಕಾರಿ

ವಿಜಯಪುರ, ಡಿ.1-ಜಿಲ್ಲೆಯ ಆದರ್ಶ ನಗರ ಪೋಲಿಸ್ ಠಾಣೆ ಗುನ್ನೆ ನಂ-121/2021 ರಡಿ ಅಗತ್ಯ ವಸ್ತುಗಳ ಕಾಯ್ದೆ 1995 ರ ಮೇರೆಗೆ ಜಪ್ತಿ ಮಾಡಲಾಗಿರುವ 36.50 ಕ್ವಿಂಟಲ್ ಹಾಲಿನ ಪುಡಿಯನ್ನು ವಿಜಯಪುರದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಿಗೆ ಹಸ್ತಾಂತರಿಸಲು ಆದರ್ಶ ನಗರ ಪೋಲಿಸ್ ಠಾಣೆಯ ಪಿಎಸ್‍ಐ ಅವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ತಿಳಿಸಿದ್ದಾರೆ.
ಅದರಂತೆ ಆದರ್ಶ ನಗರ ಪೊಲೀಸ್ ಠಾಣೆ ಪಿಎಸ್‍ಐ ಅವರಿಂದ 33.25 ಕ್ವಿಂಟಲ್ ಹಾಲಿನ ಪುಡಿಯನ್ನು ಸ್ವೀಕರಿಸಿದ ಬಳಿಕ ಕ್ಷೀರಭಾಗ್ಯ ಯೋಜನೆಯಡಿ ತೆರಿಗೆ ಹೊರತು ಪಡಿಸಿ ಸರ್ಕಾರಕ್ಕೆ ಮಾರಾಟ ಮಾಡುವ ದರದನ್ವಯ ಒಟ್ಟು ಮೊತ್ತವನ್ನು ಸರ್ಕಾರದ ಲೆಕ್ಕ ಶೀರ್ಷಿಕೆ (0408-00-101-3-00) ಗೆ ಸಂದಾಯ ಮಾಡಿ ಮೂಲ ಚಲನ ಪ್ರತಿಯನ್ನು ಸಲ್ಲಿಸಲು ವಿಜಯಪುರದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶಿಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಧ್ಯಂತರ ಆದೇಶದಲ್ಲಿ ತಿಳಿಸಿದ್ದಾರೆ.