
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.23: ನಗರದ 36ನೇ ವಾರ್ಡ್‌ನ ಬಿಜೆಪಿ ಕಾರ್ಪೊರೇಟರ್ ಕಲ್ಪನಾ ವೆಂಕಟರಾಮರೆಡ್ಡಿ ಅವರು ಕೆಅರ್ ಪಿ ಪರ ಪ್ರಚಾರ ಮಾಡುತ್ತಿರುವುದರ ಬಗ್ಗೆ ಕಾರಣ ಕೇಳಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ ಅವರು ನೋಟೀಸ್ ಜಾರಿ ಮಾಡಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬಿ-ಫಾರಂನ್ನು ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಹೊಂದಿರುತ್ತಿರಿ. ಈಗ ನೀವು ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷದ ಕಾರ್ಪೊರೇಟರ್ ಆಗಿರುತ್ತೀರಿ ಪಕ್ಷವು ಸೂಚಿಸಿದ ಪಕ್ಷದ ಸಂಘಟನೆ ಮತ್ತು ಚುನಾವಣೆ ಹಾಗೂ ಇನ್ನಿತರ ಸಾಮಾಜಿಕ ರಾಜಕೀಯ ಕಾರ್ಯಕ್ರಮಗಳಲ್ಲಿ ಪಕ್ಷದ ಪರವಾಗಿ ಕಾರ್ಯನಿರ್ವಹಿಸಬೇಕು ವಿಧಾನಸಭಾ ಚುನಾವಣೆ 2023ರ ಅಂಗವಾಗಿ ನೀವು ಬಳ್ಳಾರಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಮತ ಯಾಚನೆ ಮಾಡಬೇಕು ಆದರೆ ಕೆ.ಆರ್.ಪಿಪಿ. ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದಾಗಿ ತಿಳಿದು ಬಂದಿರುತ್ತದೆ. ಇದರಿಂದ ಪಕ್ಷಕ್ಕೆ ಹಾನಿಯಾಗುವ ಸಂದರ್ಭ ಇರುವದರಿಂದ ನಿಮಗೆ ಈ ನೋಟಿಸ್ ಮೂಲಕ ತಿಳಿಸುವದೇನೆಂದರೆ ನೀವು ಕೈಗೊಂಡ ನಿರ್ಧಾರ ತಪ್ಪು ಎಂದು ಕಂಡುಬಂದಿರುತ್ತದೆ ನಿಮ್ಮಿಂದ ಕಾರಣಕೇಳಿ ಈ ನೋಟಿಸನ್ನು ಜಾರಿ ಮಾಡುತ್ತಿದ್ದೇನೆ. ನೋಟಿಸ್ ಮುಟ್ಟಿದ 24 ಗಂಟೆಗಳ ಅವಧಿ ಒಳಗೆ ನಿಮ್ಮ ಸಮಜಾಯಿಸಿಯನ್ನು ಪತ್ರದ ಮೂಲಕ ತಿಳಿಸಬೇಕು ನಿಮ್ಮ ಸಮಜಾಯಿಸಿ ಪತ್ರ ಬಂದ ಮೇಲೆ ಅದರಲ್ಲಿನ ವಿವರಗಳನ್ನು ಗಮನಿಸಿ ನೀವು ತಪ್ಪಿತಸ್ಥರೆಂದು ಕಂಡುಬಂದರೆ, ಪಕ್ಷದ ಕಾನೂನುರಿತಿಯಲ್ಲಿ ಕ್ರಮ ಜರಗಿಸುವುದಾಗಿ ಹೇಳಿದ್ದಾರೆ.