36 ಕೋಟಿ ಆಸ್ತಿ, ರೂ 29 ಕೋಟಿ ಸಾಲ:ಪತ್ನಿ ಆದಾಯ ಹೆಚ್ಚಳ ಕರುಣಾಕರರೆಡ್ಡಿ ಆಸ್ತಿ ವಿವರ ಸಲ್ಲಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.16: ಹರಪನಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ಉಮೇದುವಾರಿಕೆ ಸಲ್ಲಿಸಿರುವ ಹಾಲಿ ಶಾಸಕ ಜಿ. ಕರುಣಾಕರರೆಡ್ಡಿ ಅವರು ಕುಟುಂಬದ ಒಟ್ಟು ಆಸ್ತಿ ರೂ 36.27 ಕೋಟಿಯಿದ್ದರೆ, ರೂ.23.56 ಕೋಟಿ ಸಾಲ ಇದೆ.
ಶನಿವಾರ ಅವರ ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಈ ವಿಷಯವನ್ನು ದಾಖಲಿಸಿದ್ದಾರೆ. ಪತ್ನಿ ವನಜಾ, ಮಕ್ಕಳಾದ ಶಶಿಧರ್ ರೆಡ್ಡಿ ಹಾಗೂ ಜಿ ವಿಷ್ಣುವರ್ಧನ್ ರೆಡ್ಡಿ ಅವರ ಸ್ಥಿರ ಹಾಗೂ ಚರ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ. ಇವರ ಕುಟುಂಬದ ಒಟ್ಟು ಸ್ಥಿರ ಮತ್ತು ಚಿರ ಆಸ್ತಿ ರೂ 38.27 ಕೋಟಿ ಇದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರೂ.23.56 ಕೋಟಿ ಸಾಲ ಇರುವುದಾಗಿ ಸೂಚಿಸಿದ್ದರೆ. 2018ರಲ್ಲಿ ಒಟ್ಟು ರೂ.36.10 ಕೋಟಿ ಆಸ್ತಿ ರೂ.34.84 ಕೋಟಿ ಸಾಲ ಘೋಷಿಸಿದ್ದರು. ಐದು ವರ್ಷಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ.
2017 18ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಗೆ ಇವರು ಸಲ್ಲಿಸಿದ ಮಾಹಿತಿಯಲ್ಲಿ ರೂ.5.91 ಲಕ್ಷ ಆದಾಯ ತೋರಿದ್ದರು. 2021-22ನೇ ಸಾಲಿಗೆ ಇದು ರೂ.3.12 ಲಕ್ಷಕ್ಕೆ ಕುಸಿದಿದೆ. ಇವರ ಪತ್ನಿ ವನಜಾ ರೂ6.52 ಲಕ್ಷ ಆಸ್ತಿ ತೆರಿಗೆ ತುಂಬಿರುವುದಾಗಿ ತೋರಿಸಿದ್ದಾರೆ. 2017-18ರಲ್ಲಿ ರೂ76 ಸಾವಿರ ಆಸ್ತಿ ತೋರಿಸಿದ್ದರು. ಪತಿಯ ಆದಾಯ ಇಳಿಕೆಯಾಗಿದ್ದರೆ, ಪತ್ನಿ ಆದಾಯ ಹೆಚ್ಚಾಗಿದೆ.