3586 ಜನರು ಕರೋನಾ ಮುಕ್ತ

ಬಳ್ಳಾರಿ, ಮೇ.16: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ನಿನ್ನೆ 3586 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಆದರೆ ಸಾವಿನ ಸರಣಿ‌ ಮುಂದುವರೆದಿದ್ದು ನಿನ್ನೆ 28 ಜನ ಸಾವನ್ನಪ್ಪಿದ್ದಾರೆ ಇದರಿಂದಾಗಿ ಈ ಸೋಂಕಿನಿಂದ ಸತ್ತವರ ಸಂಖ್ಯೆ ಜಿಲ್ಲೆಯಲ್ಲಿ 1047 ಕ್ಕೇರಿದೆ.
ಇದಲ್ಲದೆ ಇಂದು 3642 ಜನರ ಗಂಟಲ ದ್ರವ ಪರೀಕ್ಷೆ ಮಾಡಿದ್ದು ಅವರಲ್ಲಿ 1622 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಸಧ್ಯ ಜಿಲ್ಲೆಯ ಬಳ್ಳಾರಿಯಲ್ಲಿ 7385, ಸಂಡೂರು 2294, ಹೊಸಪೇಟೆ 2670 ಸೇರಿದಂತೆ ಜಿಲ್ಲೆಯಲ್ಲಿ 17518 ಕೋವಿಡ್ ಪಾಸಿಟಿವ್ ನಿಂದ ಕೂಡಿರುವ ಜನ ಕೋವಿಡ್ ಆಸ್ಪತ್ರೆ ಮತ್ತು ಹೋಂ ಐಸೊಲೇಷನ್ ನಲ್ಲಿ ಇದ್ದಾರೆ.