ಮಕ್ಕಳ ದಿನಾಚರಣೆ ಅಂಗವಾಗಿ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆ ಜ್ಞಾನಜ್ಯೋತಿ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ನಾಯಕರ ವೇಷ ಭೂಷಣ ಧರಿಸಿ ಗಮನ ಸೆಳೆದರು. ಅಧ್ಯಕ್ಷರಾದ ಚನ್ನವೀರಗೌಡ್ರ ಹಿರೇಗೌಡ್ರ, ಭರಮಪ್ಪ ಮುಗಳಿ, ಶಿವಪುತ್ರಪ್ಪ ಜವಾಯಿ, ಎಂ.ಕೆ.ಹಿರೇಗೌಡ್ರ ಉಪಸ್ಥಿತರಿದ್ದರು.