ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ ಸ್ಮರಣಾರ್ಥ ನಗರದ ಪುಣ್ಯ ಆಸ್ಪತ್ರೆಯಲ್ಲಿ ರೆಡ್‌ಕ್ರಾಸ್, ಕರ್ನಾಟಕ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಹಿಳೆಯರು ರಕ್ತದಾನ ಮಾಡಿದರು. ರೆಡ್‌ಕ್ರಾಸ್‌ನ ರಾಜುಚಂದ್ರಶೇಖರ್, ಡಾ. ಶಿವಕುಮಾರ್, ನಾಗರನವಿಲೆ, ಡಾ. ನಾಗರಾಜ್ ಪುಟ್ಟಸ್ವಾಮಿ, ಡಾ. ಪುಣ್ಯವತಿ ನಾಗರಾಜ್, ಅನುರಾಧ ನಾಗರಾಜ್, ರವಿಕುಮಾರ್, ಜಿ.ಎನ್. ಶಂಕರ್‌ರಾವ್ ನಲ್ಲೋಡೆ ಮತ್ತಿತರರು ಭಾಗವಹಿಸಿದ್ದರು.