ಅಳ್ನಾವರದ ಅಜಾಧ ರಸ್ತೆಯಲ್ಲಿನ ಬಿ.ಎ. ಪಾಟೀಲ ಕಾಂಪ್ಲೇಕ್ಸ್ ಪಕ್ಕದ ಜಾಗೆಯಲ್ಲಿ ಶಿವಾಜಿ ಮೂರ್ತಿ ಅಳವಡಿಸಲು ಉದ್ದೇಶಿತ್ ಸ್ಥಳದಲ್ಲಿ ದೀಪಾವಳಿಯ ಶುಭ ದಿನದಂದು ಪುಟ್ಟ ಶಿವಾಜಿ ಮೂರ್ತಿ ಇಟ್ಟು ಪೂಜೆ ಸಲ್ಲಿಸಲಾಯಿತು. ಹಿರಿಯರಾದ ಬಿ.ಎ. ಪಾಟೀಲ, ಪುಂಡಲಿಕ ಪಾರದಿ, ರೂಪೇಶ ಗುಂಡಕಲ್, ಮಧೂ ಬಡಸ್ಕರ್, ಪರಶುರಾಮ ಬೇಕನೇಕರ, ಯಲ್ಲಪ್ಪ ತೇರಗಾಂವ, ದತ್ತಾ ನಿಟ್ಟೂರಕರ, ಉದಯ ಗಡಕರ, ಪರಶುರಾಮ ಕಾಕತ್ಕರ, ಮಾರುತಿ ಬರಗುಂಡಿ, ಅಶೋಕ ಬರಗುಂಡಿ ಮುಂತಾದವರು ಉಪಸ್ಥಿತರಿದ್ದರು.