ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಗೋಪೂಜೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬ್ರಮರಾಂಬ ಗುಬ್ಬಿ ಶೆಟ್ಟಿ, ಶ್ರೀ ಸೋಮೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಸೋಮಣ್ಣ ಮುಳಗುಂದ, ಕುಬೇರಪ್ಪ ಮಹಾಂತಶೆಟ್ಟರ್, ಪೂರ್ಣ ಜಿ ಕರಾಟೆ, ಮಹೇಶ್ ಹೊಗೆಸೊಪ್ಪಿನ, ಬಸವರಾಜ್ ಮೆಣಸಿನಕಾಯಿ, ದುಂಡೇಶ ಕೊಟಗಿ, ಬಸವರಾಜ್ ಪುಟಾಣಿ, ಈಶ್ವರ್ ಮೆಡ್ಲೇರಿ, ಜಿಎಸ್ ಗುಡಿಗೇರಿ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಶಿರಸ್ತೇದಾರ್ ಬಿಎಸ್ ಅಣ್ಣಿಗೇರಿ, ಕಂದಾಯ ನಿರೀಕ್ಷಕ ಎಂ ಬಿ ಕಾತ್ರಾಳ, ದೇವಸ್ಥಾನದ ಮುಖ್ಯ ಅರ್ಚಕ ಸಮೀರ್ ಪೂಜಾರ್ ಪಾಲ್ಗೊಂಡಿದ್ದರು.