35 ವಾರ್ಡ್ ಗಳಲ್ಲೂ ಸ್ಯಾನಿಟೈಸರ್ ಮಾಡುತ್ತೇವೆ.ಸಿ. ಎನ್ .ಅಕ್ಮಲ್…

 ಚಿಕ್ಕಮಗಳೂರು.ಜೂ.೧೦; ಕೊರೊನಾ ಎರಡನೆ ಅಲೆ ತಡೆಗಟ್ಟಲು ಜಿಲ್ಲಾಡಳಿತ ಹಲವು ಪ್ರಯತ್ನ ಮಾಡುತ್ತಿದೆ ನಾವು ಕೂಡ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುತ್ತಿದ್ದೇವೆ ನಗರದ ಪ್ರಮುಖ ಬೀದಿಗಳಲ್ಲಿ ಮತ್ತು ಎಂ ಜಿ ರಸ್ತೆ ಐಜಿ ರಸ್ತೆ ಹಾಗೂ ಜನ ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿ ಇಂದು ನಾವು ಸ್ಯಾನಿಟೈಸರ್ ಮಾಡುತ್ತಿದ್ದೇವೆ ಒಂದು ಲಾರಿ ಟ್ಯಾಂಕರ್ ಮತ್ತು ಮಹಿಂದ್ರ ಜೀಪ್ ಬಳಸಿಕೊಂಡು ಹದಿನೈದು ಜನ ಯುವಕರ ತಂಡ ಪ್ರತಿ ಬಡಾವಣೆಗಳಲ್ಲೂ ಸ್ಯಾನಿಟೈಸರ್ ಮಾಡಲು  ಸಿದ್ಧರಿದ್ದೇವೆ   ಮುಂದಿನ ದಿನಗಳಲ್ಲಿ ನಗರದ 35 ವಾರ್ಡ್ಗಳಲ್ಲಿ ನಾವು ಸ್ಯಾನಿಟೈಸರ್ ಮಾಡುತ್ತೇವೆ ಮುಂಬರುವ   ದಿನಗಳಲ್ಲಿ ಮಕ್ಕಳಿಗಾಗಿ ನಾವುಗಳು ಜಾಗೃತಿ ವಹಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿಕೊಂಡರು ಸಾರ್ವಜನಿಕರು ಹೆಚ್ಚಾಗಿ ಓಡಾಡುವುದರಿಂದ ಈ ಕಾಯಿಲೆ ತಡೆಗಟ್ಟಲು ಸಾಧ್ಯವಿಲ್ಲ ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲಿಸಬೇಕು ನಿರ್ಲಕ್ಷಿಸಿದರೆ ಕೊರೊನಾ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ ಆದ್ದರಿಂದ ನಿಮ್ಮ ಕುಟುಂಬದ ಸದಸ್ಯರಿಗೆ ತಾವೇ ರಕ್ಷಕರಾಗಿ ಎಂದು ಕಾಂಗ್ರೆಸ್ ಕಿಸಾನ್ ವಿಭಾಗದ ರಾಜ್ಯ ಸಂಚಾಲಕರಾದ  ಸಿ .ಎನ್ ಅಕ್ಮಲ್ ಅವರು ತಿಳಿಸಿದರು  . ಸ್ಯಾನಿಟೈಸರ್ ಮಾಡುವ ಸಂದರ್ಭದಲ್ಲಿ .ಜಬೀವುಲ್ಲಾ ಸಾಧಿಕ್ ಪಾಷಾ. ರಿಜ್ವಾನ್ .ಇರ್ಫಾನ್. ಸಲ್ಮಾನ್ ಸೆಟ್. ಜೀಶಾನ್. ಶಮ್ಮ .ಟೀಮ್ 65 ತಂಡದ ಸದಸ್ಯರುಗಳು ಉಪಸ್ಥಿತರಿದ್ದರು.