35 ಲಕ್ಷ ಮೌಲ್ಯದ ಡ್ರಗ್ಸ್ ವಶ 6 ಮಂದಿ ಸೆರೆ

ಬೆಂಗಳೂರು,ಮೇ ೨೯- ಮಾದಕ ವಸ್ತು ಮಾರಾಟ ಸರಬರಾಜು ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ೬ ಮಂದಿ ಡ್ರಗ್ ಫೆಡ್ಲರ್‌ಗಳನ್ನು ಬಂಧಿಸಿ ೩೫ ಲಕ್ಷ ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾದ ಜಾನ್‌ಚಕೂವ (೩೦)ಕೇರಳದ ಆದಿತ್ಯ (೨೯),ಅಖಿಲ್ (೨೫), ಬೆಂಗಳೂರಿನ ಶೆವಿನ್ ಸುಪ್ರಿತ್ ಜಾನ್ (೨೬), ಅನಿಖೇತ್ ಕೇಶವ (೨೬), ಡಾಮ್ನಿಕ್ ಪಾಲ್ (೩೦) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಅರೋಪಿಗಳಿಂದ ೩೫ ಲಕ್ಷ ಮೌಲ್ಯದ ೪೦೦ ಎಂಡಿಎಂಎ ಮಾತ್ರೆಗಳು, ೭೬ ಎಸ್‌ಎಲ್‌ಡಿ ಪೇಪರ್‌ಗಳು, ಕಾರು, ೬ ಮೊಬೈಲ್‌ಗಳು ಸೇರಿ ೩೫ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಡಾರ್ಕ್ ವೆಬ್‌ನಿಂದ ಮಾಹಿತಿ ಸಂಗ್ರಹಿಸಿ ಆನ್‌ಲೈನ್ ಮೂಲಕ ಹಣ ಪಾವತಿಸಿ ಡ್ರಗ್ಸ್ ಖರೀದಿಸಿಕೊಂಡು ಬಂದು ಲಾಕ್‌ಡೌನ್‌ನ ಲಾಭ ಪಡೆದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು. ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.