35 ಬೈಕ್ ಕದ್ದ ನಾಲ್ವರು ಕಳ್ಳರು ಬೈಕ್ ಸಮೇತ ಅಂದರ್

ಬಳ್ಳಾರಿ, ಜು.21: ಇವರು ಅಂತಿಂತ ಕಳ್ಳರಲ್ಲ‌ ಪಲ್ಸರ್ ಬೈಕ್ ಮಾತ್ರ ಕಳ್ಳತನ ಮಾಡೋ ಕಿರಾತಕರು.
ಕಳೆದ ಮೂರು ತಿಂಗಳಲ್ಲಿ 35 ಕ್ಕೂ ಹೆಚ್ಚು ಬೈಕ್ ಕಳ್ಳತನ ಮಾಡಿರೋ ಭೂಪರು.ಕದ್ದ 35 ಬೈಕ್ ಗಳ ಪೈಕಿ 30ಕ್ಕೂ ಹೆಚ್ಚು ಬೈಕ್ ಗಳು ಪಲ್ಸರ್ ಅನ್ನೋದೇ ವಿಶೇಷ.ವಿಶೇಷವಾಗಿ ವಿನ್ಯಾಸ ಮಾಡಲಾದ ಬೈಕನ್ನೂ ಕದ್ದಿದ್ದಾರೆ.
ಮನಸಿಚ್ಛೆ ಇರೋವರೆಗೂ ಕದ್ದ ಬೈಕ್ ಗಳಲ್ಲು  ‌ಮಾಜಾ ಮಾಡೋದು ನಂತರ  ಮಾರಾಟ ಮಾಡುತ್ತಿದ್ದರು.
ಬೈಕ್ ಮಾರಾಟ ಮಾಡಿ‌ ಬಂದ ಹಣದಲ್ಲಿ ‌ಮಾಜಾ ಮಾಡೋದೇ ಇವರ ಕೆಲಸ. ಕಳ್ಳತನ ಮಾಡೋ ಈ ನಾಲ್ವರು ಸಂಬಂಧಿಕರ ಜೊತೆಗೆ ಆಪ್ತ ಸ್ನೇಹಿತರಾಗಿದ್ದಾರೆ.
ಕಳೆದ ಮೂರು ತಿಂಗಳಿಂದ ಮೂವತ್ತೈದು ಲಕ್ಷ ಮೌಲ್ಯದ ಬೈಕ್ ಕದ್ದು ಇದೀಗ ‌ಪೊಲೀಸರ ಅತಿಥಿಯಾಗಿದ್ದಾರೆ.  ಇಲ್ಲಿನ ಕೌಲ್ ಬಜಾರ್ ನ  ನಿವಾಸಿಗಳಾದ ಅಬ್ದುಲ್ ರೆಹಮಾನ್, ಮೊಹಮ್ಮದ್  ಸುಹೇಲ್, ಶೇಖ್ ಅಮನ್, ಹೈದರ್ ಅಲಿ ಬಂಧಿತರು. ಇವರೆಲ್ಲ 20 ವರ್ಷದೊಳಗಿನವರು. ಮೋಜು ಮಾಸ್ತಿಗಾಗಿ ಬೈಕ್ ಕದ್ದು ಇಉಗ ಕೌಲ್ ಬಜಾರ ಪೊಲೀಸರ ಅತಿಥಿಯಾಗಿದ್ದಾರೆ.