35 ನೇ ವಾರ್ಡಿನ ಅರ್ಹ  ಫಲಾನುಭವಿಗಳಿಗೆ ಸ್ಲಿಪ್ ವಿತರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ.6-  ಇಲ್ಲಿನ 35 ನೇ ವಾರ್ಡಿನ ಇಂದಿರಾ ನಗರ, ಸತ್ಯವಾಣಿ ನಗರ, ಎಂ.ಕೆ.ನಗರ, ರಾಜರಾಜೇಶ್ವರಿ ನಗರ ಮತ್ತು ಕರಿಮಾರೆಮ್ಮ ಕಾಲೋನಿಯಲ್ಲಿ ನ ಕೊಳಚೆ ಪ್ರದೇಶದ 487 ಕುಟುಂಬಗಳಿಗೆ ಪಟ್ಟಾ ನೀಡುವ ಕುರಿತಾದ ಸ್ಲಿಪ್ ನ್ನು ಮೇಯರ್  ಎಂ.ರಾಜೇಶ್ವರಿ, ಕಾಂಗ್ರೆಸ್ ಯುವ ಮುಖಂಡ ನಾರಾ ಭರತ್ ರೆಡ್ಡಿ ಮತ್ತು ಸ್ಥಳೀಯ ಪಾಲಿಜೆ ಸದಸ್ಯ ಶ್ರೀನಿವಾಸುಲು ಮಿಂಚು ಅವರು ವಿತರಣೆ ಮಾಡಿದ್ದಾರೆ.
ಕೊಳಚೆ ಪ್ರದೇಶದ ಮಂಡಳಿಯಿಂದ ಈಗಾಗಗಲೇ ಸರ್ವೇ ಮಾಡಿ ಅರ್ಹರನ್ನು ಗುರುತಿಸಿದ್ದು. ಅರ್ಹ ಫಲಾನುಭವಿಗಳು ಎಸ್ಸಿ ಮತ್ತು ಎಸ್ಟಿಗಳು ತಲಾ ಎರೆಡು ಸಾವಿರ ಹಾಗು ಇತರೇ ಸಮುದಾಯದವರು ನಾಲ್ಕು ಸಾವಿರ ರೂಪಾಯಿ ಶುಲ್ಕದ  ಹಣವನ್ನು ಬ್ಯಾಂಕ್ ಮೂಲಕ‌ ಪಾವತಿಸಬೇಕು.
ಈ ರೀತಿಯ ಶುಲ್ಕದ ಹಣವನ್ನು ಫಲಾನುಭವಿಗಳಿಗೆ ಕಾಂಗ್ರೆಸ್ ಮುಖಂಡ ಭರತ್ ರೆಡ್ಡಿ ಅವರು ಪಾವತಿಸುವ ಭರವಸೆ ನೀಡಿದ್ದಾರಂತೆ.

Attachments area