35 ನೇ ವಾರ್ಡಿನಲ್ಲೂ ಆಟೋ ಅಬ್ಬರ

ಬಳ್ಳಾರಿ ಏ 24 : ಕಾಂಗ್ರೆಸ್ ಪಕ್ಷ ತಮಗೆ ಟಿಕೆಟ್ ನೀಡಲಿಲ್ಲ ಎಂದು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವ 3 ನೇ ವಾರ್ಡಿನಲ್ಲಿನ ಅಭ್ಯರ್ಥಿ ಪ್ರಭಂಜನ್ ಕುಮಾರ್ ಅವರ ರೀತಿಯಲ್ಲಿ ನಗರದ 35 ನೇ ವಾರ್ಡಿನಲ್ಲಿಯೂ ಕಾಂಗ್ರೆಸ್ ಟಿಕೆಟ್ ಬಯಸಿ ದೊರೆಯದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಿಂಚು ಶ್ರೀನಿವಾಸ್ ಅವರು ಸಹ ಆಟೋ ಗುರ್ತು ಪಡೆದುಕೊಂಡಿದ್ದು. ಇಲ್ಲಿಯೂ ಆಟೋದ ಅಬ್ಬರ ಹೆಚ್ಚಿದೆ.
ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಮಹದಾಸೆಯಿಂದಲೇ ಕಳೆದ ಹಲವು ವರ್ಷಗಳಿಂದ ವಾರ್ಡಿನಲ್ಲಿ ಹಲವಾರು ರೀತಿಯ ಸಮಾಜಿಕ ಸೇವಾ ಕಾರ್ಯಚಟುವಟಿಕೆಗಳನ್ನು ಕೈ ಗೊಳ್ಳುವ ಮೂಲಕ ಜನಮನ ಸೆಳೇದಿದ್ದ ಮಿಂಚು ಶ್ರೀನಿವಾಸ್. ಈಗ ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೆಡ್ಡೊಡೆದು ನಿಂತಿದ್ದಾರೆ. ಜನ ಸಮೂಹವೂ ಹಿಂದೆ ಓಡಾಡುತ್ತಿದೆ, ಇದೆಲ್ಲ ಮತಗಳಾಗಿ ಪರಿವರ್ತನೆಯಾದರೆ ಗೆಲವಿನ ಹಾದಿ ಸನಿಹ ಆಗಬಹುದು.