35 ನೇ ವಾರ್ಡಿನಲ್ಲಿ   ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಅಭಿಯಾನ ಶುರು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.07: ನಗರದ 35ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯ ವಿ.ಶ್ರೀನಿವಾಸುಲು ಮಿಂಚು  ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅಭಿಯಾನದಡಿ ಇಂದು  ತಮ್ಮ ವಾರ್ಡಿನ ರಾಜೇಶ್ವರಿ ನಗರದಲ್ಲಿ ಮನೆ ಮನೆಗೆ ತೆರಳಿ ಹಂಚಿದರು.
ಗ್ಯಾರಂಟಿ ಕಾರ್ಡ್ ನ ಗೃಹಲಕ್ಷ್ಮಿ ಗೆ  2000, ಗೃಹಜ್ಯೋತಿಗೆ 200 ಯೂನಿಟ್ ಉಚಿತ ವಿದ್ಯುತ್  ನೀಡುವುದಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ.  ಹಾಗಾಗಿ ಎಲ್ಲರೂ ಈ ಬಾರಿ ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ಮಹಮ್ಮದ್ ಗೌಸ್,ಹೊನ್ನೂರ್ ಸ್ವಾಮಿ,ವೀರೇಂದ್ರ,ಹಂಪಿಮಲ್ಲಿ, ಗಾಧಿಲಿಂಗ,,ಕೊಂಡ ವೀರೇಶ್,ರಾಜೇಶ್,ವೆಂಕಟೇಶ್ ಕರಾಟೆ ಪ್ರಸಾದ್ ಹಾಗೂ ಕಾಂಗ್ರೆಸ್ ನ ಕಾರ್ಯಕರ್ತರಾದ ಜಯಣ್ಣ,ಅಜಿತ್,ಶ್ಯಾಮ್,ಮುರಳಿ,ಕಿಟ್ಟಿ,ಪ್ರಕಾಶ್,ಚಂದ್ರಮೌಳಿ, ನಾಗರಾಜ್, ಇನ್ನು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು