35ವರ್ಷಗಳಿಂದ ನಿರಂತರ ಸೇವೆಖ್ಯಾತ ಮೂಳೆತಜ್ಞ ಡಾ.ಮಹಬೂಬ್‍ಖಾನ್

ಸಂಜೆವಾಣಿ ನ್ಯೂಸ್
ಕೆ.ಆರ್.ನಗರ, ಮಾ.31:- ಪವಿತ್ರ ರಂಜಾನ್ ಉಪವಾಸ ಆಚಾರಣೆ ಮತ್ತು ಬಡ ಮುಸ್ಲಿಂ ಕುಟುಂಬಗಳು ನಮ್ಮಂತೆ ಸಂತೋಷದಿಂದ ಹಬ್ಬ ಆಚರಿಸುಂತೆ ಹಾಗಾಗಿ ಸಮಾನಾಗಿ ಕಾಣುವ ತನ್ನ ಸಂಪಾದನೆ ಯಲ್ಲಿ ಒಂದಿಷ್ಟು ಹಣವನ್ನು ಹಸಿದವರಿಗೆ ಸಹಾಯಮಾಡಿ ಎಂಬ ಆದೇಶವನ್ನು ಪಾಲಿಸುತ್ತಾ ಬಂದಿರುವ ನಾನು ನಮ್ಮ ಸಮುದಾಯದ ಪಟ್ಟಣದ ಮುಸ್ಲಿಂರಿಗೆ 15 ದಿನಸಿ ಪದಾರ್ಥಗಳ್ಳೂಳ ಆಹಾರ ಕಿಟನ್ನು ವಿತರಿಸುತ್ತಿದ್ದೇನೇ ಎಂದು ಸಮಾಜ ಸೇವಕ ಮೂಳೆತಜ್ಞ ಡಾ.ಮಹಬೂಬ್‍ಖಾನ್ ಹೇಳಿದರು.
ಪಟ್ಟಣದ ಜಾಮೀಯ ಮಸೀದಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲ್ಲಿ ಸುಮಾರು ಮುಸ್ಲಿಂ ಕುಟುಂಬಗಳಿಗೆ 600 ರಿಂದ 700 ಆಹಾರ ದಿನಸಿ ಕಿಟನ್ನು ವಿತರಿಸಿ ಮಾತನಾಡಿದ ಅವರು 10 ಕೆ.ಜಿ ಅಕ್ಕಿ, ಎಣ್ಣೆ, ಬೇಳೆ, ಮಸಾಲೆಸಮಾನು ಸೇರಿದಂತೆ ವಿವಿಧ ಬಗ್ಗೆಯ 15 ಬಗೆಯ ಪದಾರ್ಥಗಳನ್ನು ಪ್ರತಿ ವರ್ಷದಂತೆ ಈ ವರ್ಷವು ವಿತರಿಸುತ್ತಿದ್ದು ತಿಂಗಳ ಪೂರ್ತಿ ಉಪವಾಸವಿರುವ ನನ್ನ ಸಮುದಾಯಕ್ಕೆ ಆ ಅಲ್ಲಾ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ನಾವು ಎಷ್ಟೇ ಹಣ ಸಂಪಾದನೆ ಮಾಡಿದರು ತೃಪ್ತಿ ಇರುವುದಿಲ್ಲ ಆದರೆ ನನ್ನ ಸಂಪಾದನೆಯಲ್ಲಿ ಕೂಡಿಟ್ಟ ಹಣದಲ್ಲಿ ಅಲ್ಪಸಲ್ಪವನ್ನು ಬಡವರಿಗೆ ಸಹಾಯ ಮಾಡಿದಾಗ ಹಾಗೂ ಸಂತೋಷವೇ ಬೇರೆ ಅದನ್ನೇ ನಾನು ಸುಮಾರು 35 ವರ್ಷಗಳಿಂದ ಮಾಡಿಕೋಂಡು ಬಂದಿದ್ದೇನೆ ಮುಂದೇಯು ನನ್ನ ಮಕ್ಕಳಿಗೂ ಹೇಳಿದ್ದೇನೆ ನನ್ನ ನಂತರವು ಪ್ರತಿವರ್ಷ ನೀಡುತ್ತಿರುವ ಸಹಾಯವನ್ನು ಮುಂದುವರೆಸಿ ಎಂದು ತಿಳಿಸಿದ್ದರು.
ನಾನು ರಾಜಕಾರಣಿಗಳಂತೆ ಪ್ರತಿಫಲಕ್ಷೇ ಇಲ್ಲದೇ ಬಡವರಿಗೆ ಸಹಾಯ ಮಾಡುತ್ತ ಬಂದಿದ್ದೇನೆ ಕೇಲವರು ಉದ್ದೇಶ ಪೂರ್ವಕವಾಗಿ ಆಸೆ ಅಕಾಂಶೆಗಳನ್ನು ಇಟ್ಟಿಕೋಂಡು ಮಾಡುತರೆ ಆದರೆ ಇದೆ ಸಂದರ್ಭದಲ್ಲಿ ಅ ಅಲ್ಲಾ ರಾಜ್ಯಕ್ಕೇ ಮಳೆ ಬೇಳೆ ಯಾಗುವುದರ ಜೋತೆಗೆ ಜನರು ಸಂವೃದ್ಧಿಯಿಂದ ಸಾಮರಸ್ಯ ಜೀವನ ಸಾಗಿಸಲ್ಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಸೈಯದ್ ಅಸ್ಲಾಂ, ಶಾಫೀ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಖನ್ನೂಲಿ, ಎಜಾಸ್ ಅಹಮದ್, ಎಮ್ಜಸ್, ಶಾಕೀರ್, ಸನ, ವಸೀಂ, ಮಲ್ಲೇಶಪ್ಪ, ಸೇರಿದಂತೆ ಇನ್ನಿತರರು ಹಾಜರಿದ್ದರು