ನರೇಗಲ್ಲ ಪಟ್ಟಣದ ಬೀಚಿ ಬಳಗದ ವತಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಪ್ರಶಾಂತ ರಡ್ಡೇರ ಅವರಿಗೆ ಸನ್ಮಾನ ಮಾಡಲಾಯಿತು. ಬೀಚಿ ಬಳಗದ ಅಧ್ಯಕ್ಷ ಎಸ್.ಸಿ. ಗುಳಗಣ್ಣವರ, ಎಂ.ಎಸ್. ಧಡೇಸೂರಮಠ, ಎಂ.ವಿ. ಬಿಂಗಿ. ಡಾ| ಎಲ್.ಎಸ್. ಗೌರಿ, ಬಿ.ಟಿ. ತಾಳಿ, ಬಿ.ಬಿ. ಕುರಿ, ರವೀಂದ್ರ ರಡ್ಡೇರ, ಎಂ.ವಿ. ವೀರಾಪೂರ ಸೇರಿದಂತೆ ಇತರರಿದ್ದರು.