333 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಸಂಜೆವಾಣಿ ವಾರ್ತೆಸಿರುಗುಪ್ಪ, ಆ.12: ತಾಲ್ಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮದ ಕರಸ್ಥಳ ನಾಗಲಿಂಗ ಮಹಾಸ್ವಾಮಿ ಮಠದಲ್ಲಿ ಅಧಿಕ ಮಾಸದ ನಿಮಿತ್ತ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಶುಕ್ರವಾರ ನಡೆಯಿತು.ಲೋಕ ಕಲ್ಯಾಣಕ್ಕಾಗಿ ಗುರುಗಳ ಕತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ಹಾಗೂ ಅಖಂಡ ಶಿವನಾಮ ಸಂಕೀರ್ತನೆ (ಭಜನೆ) ಯನ್ನು ಗುರುವಾರ  ನಡೆಯಿತು.ಶುಕ್ರವಾರ ಬೆಳಿಗ್ಗೆ ಕರಸ್ಥಳ ಮಹಾಲಿಂಗ ಮಹಾಸ್ವಾಮಿ ಪ್ರತಿಷ್ಠಾಪಿಸಿದ ಕಳಿಕಾದೇವಿ ಮೂರ್ತಿಗೆ ಮಹಾರುದ್ರಾಭಿಷೇಕ ಹಾಗೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ 105 ಕೆ. ಜಿ ಬೇಳೆಯ ಹೋಳಿಗೆ ನೈವೇದ್ಯ ಅರ್ಪಣೆ ಹಾಗೂ ಅಧಿಕ ಮಾಸದ ಪ್ರಯುಕ್ತ 333 ಸುಮಂಗಲೆಯರಿಗೆ ಉಡಿ ತುಂಬಲಾಯಿತು.ಈ ಸಂದರ್ಭದಲ್ಲಿ  ಸಾಂಭಮೂರ್ತಿ ಸ್ವಾಮಿಜಿ, ನಾಗಲಿಂಗ ಸ್ವಾಮಿಜಿ ಹಾಗೂ ಚೆನ್ನಯ್ಯ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು, ಹಾಗೂ ಅಯ್ಯೇಂದ್ರ ಸ್ವಾಮಿ, ಸುರೇಂದ್ರ ಸ್ವಾಮಿ ಇದ್ದರು.