33 ನೇ ವಾರ್ಡ್‌ನಲ್ಲಿ ಕೋವಿಡ್ ಲಸಿಕಾ ಅಭಿಯಾನ.

ದಾವಣಗೆರೆ.ಜೂ.೪;  ಮಹಾನಗರ ಪಾಲಿಕೆಯ 33 ನೇ ವಾರ್ಡ್‌ನ ಸರಸ್ವತಿ ನಗರದ ಕೆ.ಎಸ್.ಎಸ್.ಕಾಲೇಜಿನಲ್ಲಿ ಎರಡನೇ ಡೋಸ್ ಕೋವಾಕ್ಸಿನ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮಹಾನಗರ ಪಾಲಿಕೆ ಸದಸ್ಯರಾದ ಕೆ.ಎಮ್.ವೀರೇಶ್ ಅವರು ಈ ಕಾರ್ಯಕ್ರಮವನ್ನು ಸರಸ್ವತಿ ನಗರ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ವಿಶೇಷ ಮುತುವರ್ಜಿಯಿಂದ ಜಿಲ್ಲಾ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ್ದರು.ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪಾಲಿಕೆ ಸದಸ್ಯ ಕೆ.ಎಮ್‌.ವೀರೇಶ್.. ಸರಕಾರ ಪ್ರತಿಯೊಬ್ಬರಿಗೂ ಲಸಿಕೆ ನೀಡಲು‌ ಬದ್ಧವಾಗಿದೆ. ಸರಸ್ವತಿ ನಗರದಲ್ಲಿ ಇಂದು ಎರಡನೇ ಕ್ಯಾಂಪ್ ನಡೆಯುತ್ತಿದೆ. ದಿನದಿಂದ ‌ದಿನಕ್ಕೆ ಸೋಂಕಿತರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆದರೆ ಸಾರ್ವಜನಿಕರು ಅತೀ ಎಚ್ಚರಿಕೆಯಿಂದ ಇರಬೇಕಾಗಿದೆ. ಹಲವರು ಮಾಸ್ಕ್ ಧರಿಸದೇ ಇರುವುದು ಅಥವಾ ಸರಿಯಾದ ವಿಧಾನದಲ್ಲಿ ಮಾಸ್ಕ್ ಧರಿಸದಿರುವುದನ್ನು ನಾನು ಗಮನಿಸುತ್ತಿದ್ದೇನೆ. ದಯವಿಟ್ಟು ಮಾಸ್ಕ್ ಧರಿಸುವ ವಿಚಾರದಲ್ಲಿ ಅಸಡ್ಡೆ ಮಾಡಬೇಡಿ. ಸರಕಾರದ ಎಲ್ಲಾ ಅಗತ್ಯ ಕೋವಿಡ್ ನಿಯಮಗಳನ್ನು ಪಾಲಿಸುವುದರೊಂದಿಗೆ ನಾವು ಆರೋಗ್ಯವಾಗಿರುವುದರ ಜೊತೆಗೆ ನಮ್ಮ ಸುತ್ತಮುತ್ತಲಿನವರು ಕೂಡಾ ಆರೋಗ್ಯದಿಂದಿರಲು ಸಹಕರಿಸಬೇಕೆಂದು ಮನವಿ ಮಾಡಿದರು. 
ಇಂದಿನ ಲಸಿಕಾ ಅಭಿಯಾನದಲ್ಲಿ ಸುಮಾರು 400 ಜನರಿಗೆ ಎರಡನೇ ಡೋಸ್ ಕೋವಾಕ್ಸಿನ್ ಹಾಕಲಾಯಿತು. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ  ಇನ್ನೂ ಈ ರೀತಿಯ ಕಾರ್ಯಕ್ರಮ ‌ನಡೆಸಲಾಗುವುದು ಎಂದು ವೀರೇಶ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ  ಕೆ.ಎಮ್.ಸುರೇಶ್,  ಹೆಚ್.ಕೆ.ಬಸವರಾಜ್, ಎನ್‌.ಹನುಮಂತ ನಾಯ್ಕ್,  ಪಾಲಿಕೆ ಸದಸ್ಯರಾದ ಎನ್.ಮಂಜುನಾಥ ನಾಯ್ಕ್, ಪಿ.ಎಸ್.ಬಸವರಾಜ್ ಇತರರಿದ್ದರು.