33 ನೇ ವಾರ್ಡು ಬಿಜೆಪಿ ಅಭ್ಯರ್ಥಿಯಿಂದ ಮತಯಾಚನೆಯಷ್ಟೇ ಅಲ್ಲ ಮಾಸ್ಕವಿತರಣೆ

ಬಳ್ಳಾರಿ ಏ 21 : ಇಲ್ಲಿ ನಡೆಯುತ್ತಿರುವ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ತಮ್ಮೊಂದಿಗೆ ನೂರಾರು ಜನರನ್ನು ಕರೆದುಕೊಂಡು ಪ್ರಚಾರ ಮಾಡುತ್ತಾರೆ, ತಮಗೆ ಮತ ನೀಡುವಂತೆ ಕೇಳುತ್ತಾರೆ. ಆದರೆ 33 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಬಿ.ಸುನಿತಾ ಹನುಮಂತಪ್ಪ ಅವರು ಮತಯಾಚನೆ ಮುನ್ನ ಮಾಸ್ಕ್ ಧರಿಸಿದ ಮತದಾರರಿಗೆ ಮೊದಲು ಮಾಸ್ಕ ನೀಡಿ. ನಂತರ ಮತಯಾಚನೆ ಮಾಡುತ್ತಿರುವುದು ವಿಶೇಷವಾಗಿದೆ.
ಕಳೆದ ಹಲವು ದಿನಗಳಿಂದ ಇದೇ ರೀತಿ ಅವರು ತಮ್ಮೊಂದಿಗೆ ಸರ್ಕಾರದ ನಿಯಮಗಳಂತೆ ಕೆಲವರನ್ನು ಮಾತ್ರ ಕರೆದುಕೊಂಡು ಮನೆ ಮನೆಗೆ ತೆರಳುವ ಸಂದರ್ಭದಲ್ಲಿ ರಸ್ತೆಯಲ್ಲಿ ಎದುರಿಗೆ ಬರುವ ಜನರಿಗೂ ಕರಪತ್ರ ನೀಡಿ ಮತ ಕೇಳುಯವಾಗ ಅವರು ಮಾಸ್ಕ ಧರಿಸಿರದಿದ್ದರೆ. ಅವರಿಗೆ ಮಾಸ್ಕ್ ನೀಡಿ ದಿನೇ, ದಿನೇ ನಗರದಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿನ ಬಗ್ಗೆ ತಿಳಿಸಿ ಸದಾ ಮಾಸ್ಕ್ ಧರಿಸಿ ಓಡಾಡುವಂತೆ ಮನವಿ ಮಾಡುತ್ತಿದ್ದಾರೆ.