ಕೋಲಾರ,ಸೆ.೨೫: ಭಾರತೀಯ ಜನತಾ ಪಕ್ಷದ ಕೋಲಾರ ಗ್ರಾಮಾಂತರ ಮಂಡಲದ ವತಿಯಿಂದ, ನಮ್ಮ ದೇಶದ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ, ಕೋಲಾರ ತಾಲ್ಲೂಕಿನ ಚನ್ನಸಂದ್ರ ಗ್ರಾಮದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ, ಹಾಗೂ ಸಾರ್ವಜನಿಕ ಹಿಂದೂ ಸ್ಮಶಾನದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಮಂಡಲ ಅಧ್ಯಕ್ಷ ಸಿ .ಡಿ ರಾಮಚಂದ್ರ ಗೌಡ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.