ಲಿಂ.ಹಾನಗಲ್ ಕುಮಾರೇಶ್ವರರ 154 ನೇ ಜಯಂತ್ಯೋತ್ಸವದ ಹಾಗೂ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಕುಮಾರೇಶ್ವರ ಭಜನಾ ಮಂಡಳಿಯ ವಾದ್ಯಗಳೊಂದಿಗೆ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಮುಕ್ಕನಗೌಡ ಜನಾಲಿ, ಮಾಗುಂಡಪ್ಪ ಕೆರಿಹೊಲದ, ಮುಚಖಂಡಯ್ಯ ಮುಚಖಂಡಿ, ಮಾನಗೌಡ ವೀರಲಿಂಗನಗೌಡ್ರ, ಮಾಗುಂಡಯ್ಯ ಗೋವಣಕಿ, ವಿರೇಶ ಕಪ್ಪರದ, ಬೈರೇಗೌಡ ಕೋಟಿ, ಲಕ್ಷ್ಮಣ ಕೊಚಲ ಸೇರಿದಂತೆ ಮುಖಂಡರು ಹಾಜರಿದ್ದರು.