ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಸಂಸ್ಥಾಪಕ ಪ್ರವೀಣ್ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಕಾರ್ಯಕರ್ತರು ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹಣ್ಣು-ಹಂಪಲು ವಿತರಿಸಿದರು. ತಾಲೂಕ ಅಧ್ಯಕ್ಷ ಮಹೇಶ್ ಕಲಘಟಗಿ ನೇತೃತ್ವದಲ್ಲಿ ಕಾರ್ಯಕರ್ತರಾದ ಮಂಜುನಾಥ್ ಗಾಂಜಿ, ಪರಶುರಾಮ್ ಹಂಜಗಿ, ಮಲ್ಲನಗೌಡ ಪಾಟೀಲ್, ನಾಸೀರ್ ಕಾನದ ಕಿತ್ತೂರು, ಸಂತೋಷ್ ಬಳ್ಳಾರಿ, ಚಂದ್ರು ಪಾಣಿಗಟ್ಟಿ, ಜೆ ಸಿ ಶಿವಯ್ಯನ ಮಠ ಸೇರಿದಂತೆ ಅನೇಕರಿದ್ದರು.