ಇನ್ನರವೀಲ್‍ಕ್ಲಬ್ ಹಾಗೂ ರೋಟರಿ ಕ್ಲಬ್ ಹುಬ್ಬಳ್ಳಿ-ಉತ್ತರ ವಲಯ ವತಿಯಿಂದ ಪರಿಸರ ಸ್ನೇಹಿ ಗಣಪತಿ ವಿಸರ್ಜನಾ ಕಾರ್ಯಕ್ರಮವು ಹುಬ್ಬಳ್ಳಿಯ ಅಕ್ಷಯ ಕಾಲೋನಿಯ ಉದ್ಯಾನವನ ಆವರಣದಲ್ಲಿ ಜರುಗಿತು. ಪಾಲಿಕೆ ಸದಸ್ಯೆ ವೀಣಾ ಬರದ್ವಾಡ,  ಇನ್ನರವೀಲ್‍ಕ್ಲಬ್‍ನ ಅಧ್ಯಕ್ಷೆ ಪ್ರೇಮಲತಾ ಪಾಟೀಲ, ಉಪಾಧ್ಯಕ್ಷೆ ಮಮತಾ ಹಟ್ಟಿಹೋಳಿ, ಕಾರ್ಯದರ್ಶಿ ದೀಪಾ ಪಿಂಪಲೆ, ರೋಟರಿ ಕ್ಲಬ್ ಹುಬ್ಬಳ್ಳಿ-ಉತ್ತರ ವಲಯದ ಅಧ್ಯಕ್ಷ ಶಂಕರ ಹಿರೇಮಠ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಧಾರವಾಡ ಜಿಲ್ಲಾ ಘಟಕದ ಉಪಾಧ್ಯಕ್ಷ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಡಾ. ಮಂಜುಳಾ ಪ್ರಕಾಶ ನಿಡವಣಿ, ಚೇತನ ಬರದ್ವಾಡ, ವಿಜಯ ಹಟ್ಟಿಹೋಳಿ, ಮನೋಹರ ಕೊಟ್ಟೂರಶೆಟ್ಟರ, ಸೂರ್ಯಕಾಂತ ಹೊಸುರ, ರಾಜೇಶ ಕೆ. ಸಿಂಗ್, ಅಶೋಕ   ಸೋಮಾಪುರ, ರಾಮ ಮೋಹನ, ಮುಂತಾದವರು ಇದ್ದರು.