32 ಅಡಿ ಆಂಜನೇಯ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆ

ಕೆ.ಆರ್. ಪುರ,ಮಾ.೩- ಶ್ರೀ ರಾಮ ದೇವಸ್ಥಾನ ವಿವಿಧೋದ್ದೇಶ ಟ್ರಸ್ಟ್ ಹಾಗೂ ಹಿರಂಡಹಳ್ಳಿ ಗ್ರಾಮಸ್ಥರ ವತಿಯಿಂದ ೩೩ ಅಡಿ ಎತ್ತರದ ಏಕಾಶಿಲಾ ಆಂಜನೇಯ ಸ್ವಾಮಿ ದೇವರನ್ನು ಹಿರಂಡಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಲೋಕ ಕಲ್ಯಾಣಕ್ಕಾಗಿ ಹಿರಂಡಹಳ್ಳಿ ಗ್ರಾಮದಲ್ಲಿ ಶ್ರೀ ರಾಮ ದೇವಸ್ಥಾನ ಹಾಗೂ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.
ಕೋಲಾರದಿಂದ ತರಿಸಲಾದ ಏಕಶಿಲಾ ವಿಗ್ರಹವಾಗಿದ್ದು, ಕಳೆದ ಮೂರು ವರ್ಷಗಳಿಂದ ಈ ಬೃಹತ್ ರೂಪಿ ಹನುಮಾನ್ ವಿಗ್ರಹ ಕೆತ್ತನೆ ಕಾರ್ಯ ಜರುಗಿದೆ. ೧೩ ಅಡಿ ಅಗಲ ಹಾಗೂ ೩೩ ಅಡಿ ಏತ್ತರದ ಈ ಏಕಶಿಲಾ ವಿಗ್ರಹ ಸಂಪೂರ್ಣಗೊಂಡಿರುವುದು ಗ್ರಾಮಸ್ಥರು ಹಾಗೂ ನಿವಾಸಿಗಳಿಗೆ ಹೆಚ್ಚು ಸಂತಸ ಉಂಟುಮಾಡಿದೆ.
ಸಮಾಜದಲ್ಲಿ ಶಾಂತಿ – ಸುವ್ಯವಸ್ಥೆ ನೆಲೆಸಲು ದೇವಾಲಯಗಳ ನಿರ್ಮಾಣ ಸಹಕಾರಿಯಾಗಲಿವೆ ಎಂದು ಜಿ.ಪಂ ಸದಸ್ಯ ಗಣೇಶ್ ತಿಳಿಸಿದರು.
ಬೃಹತ್ತಾದ ಶಿಲೆಯನ್ನು ಎರಡು ಕ್ರೇನ್‌ಗಳ ಮೂಲಕ ಪೀಠದ ಮೇಲೆ ಪ್ರತಿಷ್ಠಾಸಲಾಯಿತು. ಈ ಸಂದರ್ಭದಲ್ಲಿ ಜಿ ಪಂ ಸದಸ್ಯ ಗಣೇಶ್, ಪಾಲಿಕೆ ಮಾಜಿ ಸದಸ್ಯ ನಾಗೇನಹಳ್ಳಿ ರಾಜಣ್ಣ ಶ್ರೀ ರಾಮ ದೇವಸ್ಥಾನ ಮತ್ತು ವಿವಿಧೋದ್ದೇಶ ಟ್ರಸ್ಟ್‌ನ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.