312 ವಾಹನ ಜಪ್ತಿ, 59 ಸಾವಿರ ರೂ.ದಂಡ

ಕಲಬುರಗಿ,ಮೇ.30-ಕೋವಿಡ್-19 ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿದ್ದು, ಶನಿವಾರ ಅನಗತ್ಯವಾಗಿ ಓಡಾಟ ನಡೆಸಿದ 312 ವಾಹನಗಳನ್ನು ಜಪ್ತಿ ಮಾಡಿರುವ ಪೊಲೀಸರು ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೀದಿಗೆ ಇಳಿದವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿದ್ದಾರೆ.
44 ಬೈಕ್, 4 ತ್ರಿಚಕ್ರ ಮತ್ತು 8 ನಾಲ್ಕುಚಕ್ರದ ವಾಹನ ಜಪ್ತಿ ಮಾಡಿರುವ ಪೊಲೀಸರು 59,850 ರೂಪಾಯಿ ದಂಡ ಸಂಗ್ರಹಿಸಿದ್ದಾರೆ.