31 ರಂದು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಬಿಡುಗಡೆ

ಬೀದರ್: ಜು.29:ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ತಾರಾ ಅನುರಾಧಾ ಹಾಗೂ ಸುಚೇಂದ್ರ ಪ್ರಸಾದ್ ಅಭಿನಯದ, ಸರಜು ಕಾಟಕರ್ ರವರ ಕಾದಂಬರಿ ಆಧಾರಿತ, ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ವಿಶಾಲರಾಜ ನಿರ್ದೇಶನದ ,ಬಸವರಾಜ ಭೂತಾಳಿ ನಿರ್ಮಾಣದಲ್ಲಿ ಹೊರಹೊಮ್ಮಿರುವ
ಭಾರತದ ಪ್ರಪ್ರಥಮ ಶಿಕ್ಷಕಿ ಅಕ್ಷರದ ಅವ್ವ , ಮಾತೆ “ಸಾವಿತ್ರಿಬಾಯಿ ಫುಲೆ” ರವರ ಜೀವನ ಚರಿತ್ರೆಯ ಚಲನ ಚಿತ್ರವು
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ಬೀದರ, ಅಮೋಘ ಕ್ರೀಯೆಶನ್ ಹಾಗೂ ಬುಧ್ದ ಬೆಳಕು ಟ್ರಸ್ಟ್ ಬೀದರ ಇವರ ಸಂಯುಕ್ತ ಆಶ್ರಯದಲ್ಲಿ
ದಿನಾಂಕ 31-7-2022 ರಂದು ಬೆಳಿಗ್ಗೆ 8:30 ಕ್ಕೆ ಬಿಗ್ ಬಜಾರ್ ನಲ್ಲಿರುವ ಸಪ್ನಾ ಮಲ್ಟಿಪ್ಲೆಕ್ಸ್ ಥೆಯೆಟರ್ ನಲ್ಲಿ ಬಿಡುಗಡಗೊಳ್ಳಲಿದೆ
ಚಲನ ಚಿತ್ರದ ಬಿಡುಗಡೆ ಸಮಾರಂಭದ ಉದ್ಘಾಟನೆಯನ್ನು ಡಿ.ಡಿ.ಪಿ.ಐ ಗಣಪತಿ ಬಾರಟಗೆ ನೆರೆವೆರಿಸುವರು
ಅಧ್ಯಕ್ಷತೆಯನ್ನು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಸಾರಿಕಾ ಎಸ್ ಗಂಗಾ ವಹಿಸುವರು
ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಗಂದಗೆ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶೇಕ್ ಮಹೆಬುಬ್ ಪಟೇಲ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ ಮಾಲಿ ಪಾಟೀಲ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೇಟ್ಟಿ , ಮಧ್ಯಾಹ್ನ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕಿ ಗೀತಾ ಗಡ್ಡೆ ಬುಧ್ದ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಭಾಗವಹಿಸುವವರು.
ಬೀದರ ಜಿಲ್ಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಚಲನ ಚಿತ್ರದ ಸದುಪಯೋಗ ಪಡೆದುಕೊಳ್ಳುವಂತೆ
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಸಾರಿಕಾ ಎಸ್ ಗಂಗಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.