31ರಂದು ಭೈರಾಮಡಗಿ ಕಾಲಭೈರವೇಶ್ವರ ರಥೋತ್ಸವ

ಕಲಬುರಗಿ: ಮಾ.29:ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಕಾಲಭೈರವೇಶ್ವರ ಹದಿನಾಲ್ಕನೇ
ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಇದೇ ಮಾರ್ಚ 31ರಂದು ಸಂಜೆ 6ಕ್ಕೆ ಮಹಾರಥೋತ್ಸವ
ಜರುಗಲಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ಕಳೆದ ಮಾರ್ಚ 22ರಿಂದ ಪ್ರತಿದಿನ ರಾತ್ರಿ 8.30ರಿಂದ
ರಾತ್ರಿ 10.30ರವರೆಗೆ ಬೀದರ್ ಜಿಲ್ಲೆಯ ಹುಲ್ಯಾಳದ ಶರಣೆ ಜಯಶ್ರೀದೇವಿ ಮಾತಾ ಅವರಿಂದ
ಆಧ್ಯಾತ್ಮೀಕ ಪ್ರವಚನ ಜರುಗಿ ಬರುತ್ತಲಿದ್ದು, ಮಾ.30 ರಂದು ಪ್ರವಚನ ಮಂಗಲೋತ್ಸವ
ನಡೆಯಲಿದೆ.
ಮಾರ್ಚ್ 30ರಂದು ರಂದು ಬೆಳಿಗ್ಗೆ ಸಾಯಂಕಾಲ 6ಕ್ಕೆ ಉಚ್ಚಾಯಿ ಕಾರ್ಯಕ್ರಮ ತದನಂತರ
ರಾತ್ರಿ 10ಕ್ಕೆ ಪಟ್ಟದ ಪುರವಂತರಿಂದ ಆಗ್ನಿ ಪುಟು ನಡೆಯುವುದು. ಮರುದಿನ ಮಾರ್ಚ
31ರಂದು ಬೆಳಿಗ್ಗೆ 5ಕ್ಕೆ ಕಾಲಭೈರವೇಶ್ವರ ಹಾಗೂ ರಾಮಲಿಂಗೇಶ್ವರ ಕರ್ತೃ ಗದ್ದುಗೆಗೆ
ರುದ್ರಾಭಿಷೇಕ ನಡೆದು ತದನಂತರ ಪುರವಂತರಿಂದ ಆಗ್ನಿ ಪ್ರವೇಶ ನಡೆಯುವುದು. ಬೆಳಿಗ್ಗೆ
11ಕ್ಕೆ ಮಹಾಂತೇಶ್ವರ ವಿರಕ್ತ ಮಠದಿಂದ ಪಲ್ಲಕ್ಕಿ, ಕಳಸ, ನಂದಿಕೋಲ, ಕುಂಭ ಸಕಲ ವಾದ್ಯ
ವೈಭವಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದು ದೇವಸ್ಥಾನಕ್ಕೆ ಆಗಮಿಸಿದ
ನಂತರ ಸಂಜೆ 6ಕ್ಕೆ ರಥೋತ್ಸವ ಜರುಗಲಿದೆ. ರಥೋತ್ಸವ ನಂತರ ಮದ್ದು ಸುಡುವ ಕಾರ್ಯಕ್ರಮವೂ
ನಡೆಯಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಖ್ಯಾತ ಗವಾಯಿಗಳಿಂದ ಸಂಗೀತ ಕಾರ್ಯಕ್ರಮ
ಜರುಗಿ ಬರುತ್ತಲಿದೆ.
ಏ. 1ರಂದು ಸಂಜೆ 5ಕ್ಕೆ ಪ್ರಸಿದ್ಧ ಪೈಲ್ವಾನರಿಂದ ಕುಸ್ತಿ ಪಂದ್ಯಗಳು ಜರುಗಲಿವೆ.
ಐತಿಹಾಸಿಕ ಕಾಲಭೈರವೇಶ್ವರ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳು ಹೆಚ್ಚಿನ
ಸಂಖ್ಯೆಯಲ್ಲಿ ಆಗಮಿಸಬೇಕೆಂದು ದೇವಸ್ಥಾನ ಭಕ್ತ ಮಂಡಳಿ ಕೋರಿದೆ.