31ನೇ ವಾರ್ಡಿನಲ್ಲಿ ಕೋವಿಶೀಲ್ಡ್ ಲಸಿಕೆ

ದಾವಣಗೆರೆ.ಜೂ.೯; ನಗರದ ಎಸ್.ಓ.ಜಿ. ಕಾಲೋನಿಯ 31ನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 45 ವರ್ಷದ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಯಿತು. ಮೇಯರ್ ಎಸ್.ಟಿ. ವೀರೇಶ್, 31ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್, ಮುಖಂಡ ಹದಡಿ ವೆಂಕಟೇಶ್, ಡಾ. ರೇಖಾ, ಬಿ. ಕಲ್ಲೇಶಪ್ಪ, ಆಟೋ ರವಿ, ಹೆಚ್. ಪ್ರಕಾಶ್, ಕೆ.ಜಿ. ಪ್ರಕಾಶ್, ಮಾಯಕೊಂಡ ಹನುಮಂತಪ್ಪ, ಶ್ರೀಕಾಂತ್, ಸಿದ್ದು, ಮಂಜು, ಶ್ರೀಮತಿ ಸಂಗೀತಾ, ಸ್ಟುಡಿಯೋ ಸಂತೋಷ್, ಜಯಸನ್, ಮಹಾನಗರಪಾಲಿಕೆಯ ಸಂತೋಷ್, ಮಂಜುನಾಥ್ ಎಂ. ಬಾಲರಾಜ್ ಎಂ. ಶುಶ್ರೂಷಕರು, ಆಶಾ ಕಾರ್ಯಕರ್ತರು, ಆರೋಗ್ಯ ಸಹಾಯಕರು ಈ ಸಂದಭದಲ್ಲಿ ಉಪಸ್ಥಿತರಿದ್ದರು.