ಅಥಣಿ,ಸೆ 9- ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟುಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಜೀರ ಹುಸೇನಸಾಬ ದ್ರಾಕ್ಷಿ (55) ಭೀಮಶೇನ್ ವಿಷ್ಣು ಯಳಮಲ್ಲೆ (58) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಇವರು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದರು ಎನ್ನಲಾಗಿದ್ದು, ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುಮಾರು 10,520 / -ರೂ ಕಿಮ್ಮತ್ತಿನ 526 ಗ್ರಾಂ ತೂಕದ ಗಾಂಜಾ ಮಾದಕ ವಸ್ತುವನ್ನು ಜಪ್ತ ಮಾಡಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಪೊಲೀಸ ಅಧೀಕ್ಷಕರು ಡಾ. ಲಕ್ಷಣ ನಿಂಬರಗಿ, ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಅಮರನಾಥ ರೆಡ್ಡಿ , ಕೆಎಸ್‌ಪಿಎಸ್ , ಬೆಳಗಾವಿರವರ ಮಾರ್ಗದರ್ಶನದಲ್ಲಿ ಮನೋಜಕುಮಾರ ನಾಯ್ಕ, ಡಿಎಸ್‌ಪಿ ಚಿಕ್ಕೋಡಿ ಪ್ರಭಾರ ಅಥಣಿ ಹಾಗೂ ಶಂಕರಗೌಡಾ ಬಸನಗೌಡರ, ಸಿಪಿಐ ಅಥಣಿ ರವರ ಉಸ್ತುವಾರಿಯಲ್ಲಿ ಕುಮಾರ ಹಾಡಕಾರ ಪಿಎಸ್‌ಐ ( ಕಾ & ಸು ) ರವರ ನೇತೃತ್ವದಲ್ಲಿ ಅಥಣಿ ಪೋಲೀಸ್ ಠಾಣೆಯ ಸಿಬ್ಬಂದಿಗಳಾದ ಪಿ ಎನ್ ಕುರಿ, ಕೆ ಬಿ ಶಿರಗೂರ ,ಎಸ್ ಜಿ ಮನ್ನಾಪೂರ ಇವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.