301 ಜನ ನರೇಗಾ ಕೂಲಿಕಾರರ ಆರೋಗ್ಯ ತಪಾಸಣೆ

ಕಲಬುರಗಿ.ಮೇ.29:ಕಲಬುರಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ಕೌಲಗಿ ಇವರ ನೇತೃತ್ವದಲ್ಲಿ ಕಲಬುರಗಿಯ ಸಣ್ಣೂರ ಗ್ರಾಮ ಪಂಚಾಯಿತಿಯ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಸೋಮವಾರ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಕೂಲಿಕಾರರು ತಮ್ಮ ದೇಹದ ಆರೋಗ್ಯ ಸಂರಕ್ಷಣೆಯಲ್ಲಿ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಲು ತಿಳಿಸಲಾಯಿತು.  ಆರೋಗ್ಯ ಅಮೃತ ಅಭಿಯಾನದಡಿ ಮಹಾತ್ಮಾ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳದಲ್ಲಿನ 197 ಮಹಿಳೆಯರು ಹಾಗೂ 74 ಪುರುಷರು  ಸೇರಿದಂತೆ ಒಟ್ಟು 301 ಜನ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. 
  ಕೂಲಿ ಕಾರ್ಮಿಕರ ರಕ್ತದೊತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಹಲ್ಲು ಪರೀಕ್ಷೆ ಸೇರಿದಂತೆ ಮುಂತಾದ ಪರೀಕ್ಷೆಗಳನ್ನು ಮಾಡಲಾಯಿತು.  
 ಈ ಸಂದರ್ಭದಲ್ಲಿ  ತಾಲೂಕು ಪಂಚಾಯತ್‍ನ ಐಇಸಿ ಸಂಯೋಜಕ ಮೋಸಿನ ಖಾನ್, ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಯ ಸಿಬ್ಬಂದಿ  ವರ್ಗದವರು ಉಪಸ್ಥಿತರಿದ್ದರು.